ಚಿಕ್ಕಬಳ್ಳಾಪುರ; ಚಿಕಿತ್ಸೆಗೆಂದು ಬಂದ ರೋಗಿಗಳು ಜಿಲ್ಲಾಸ್ಪತ್ರೆಯಲ್ಲಿ ವೀಲ್‌ಚೇರ್‌ಗಾಗಿ ಪರದಾಟ ನಡೆಸಿದ್ದಾರೆ. ಆರೋಗ್ಯ ಸಚಿವರ ತವರು ಕ್ಷೇತ್ರದ ಜಿಲ್ಲಾಸ್ಪತ್ರೆಯಲ್ಲಿ ಈ ಪರಿಸ್ಥಿತಿ ನಿರ್ಮಾಣವಾಗಿದೆ.
ರೋಗಿಯನ್ನು ಕರೆತಂದ ಆಟೋ ಚಾಲಕನಿಂದಲೆ ವೀಲ್ ಚೇರ್ ನೂಕುವಂತ ಪರಿಸ್ಥಿತಿ ಇದೆ. ಜಿಲ್ಲಾಸ್ಪತ್ರೆಯ ದುರಾಡಳಿತವೆ ರೋಗಿಗಳ ಪರದಾಟಕ್ಕೆ ಮುಖ್ಯ ಕಾರಣವಾಗಿದೆ. ರೋಗಿಯ ಸಹಾಯಕ್ಕೆ ಆಸ್ಪತ್ರೆ ಸಿಬ್ಬಂದಿ ಬರಲ್ಲ ಎಂದು ಆರೋಪಿಸಿ ಜನ ಆಕ್ರೋಶ ಹೊರಹಾಕಿದ್ದಾರೆ. ಇದು ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯವಾ.? ಅಥವಾ ಆಡಳಿತ ಮಂಡಳಿ ಅಧಿಕಾರಿಗಳ ನಿರ್ಲಕ್ಷ್ಯವೋ? ಅದ್ರಿಂದ ರೋಗಿಗಳು ಆಸ್ಪತ್ರೆ ವ್ಯವಸ್ಥೆ ಮೇಲೆ ಹಿಡಿಶಾಪ ಹಾಕುತ್ತಿದ್ದಾರೆ.
PublicNext
28/09/2022 05:36 pm