ಚಿಕ್ಕಬಳ್ಳಾಪುರ : ಗ್ರಾಹಕರಿಗೆ ನೀಡಬೇಕಿದ್ದ ಪಡಿತರ ರಾಗಿಯನ್ನು ಗ್ರಾಹಕರಿಗೆ ವಿತರಿಸದೆ ಸ್ವತಃ ನ್ಯಾಯಬೆಲೆ ಅಂಗಡಿ ಮಾಲೀಕನೇ ಕದ್ದು ಸಾಗಿಸಿರುವ ಘಟನೆ ಚಿಕ್ಕಬಳ್ಳಾಪುರ ತಾಲ್ಲೂಕಿನ ನಲ್ಲಕದಿರೆನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ನ್ಯಾಯಬೆಲೆ ಅಂಗಡಿ ಮಾಲೀಕ ಶ್ರೀನಿವಾಸ್ ಪಡಿತರ ರಾಗಿಯನ್ನು ಕದ್ದು ಮುಚ್ಚಿ ಸಾಗಿಸಿದ್ದು, ಕದ್ದು ಮುಚ್ಚಿ ಸಾಗಿಸುತ್ತಿದ್ದ ವಿಡಿಯೋ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಗ್ರಾಮಸ್ಥರು ನ್ಯಾಯಬೆಲೆ ಅಂಗಡಿ ಮಾಲೀಕನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು ಗ್ರಾಹಕರಿಗೆ ಕೇವಲ ಪಡಿತರ ಅಕ್ಕಿ ವಿತರಣೆ ಮಾಡಿ ರಾಗಿ ಕೊಡದೇ ವಂಚನೆ ಮಾಡಿದ್ದಾರೆ ಎಂದು ಆರೋಪಿಸಿ ನ್ಯಾಯಬೆಲೆ ಅಂಗಡಿ ಮುಂದೆ ಸ್ಥಳೀಯರು ಪ್ರತಿಭಟನೆ ನಡೆಸಿದ್ದಾರೆ.
ಈ ಬಗ್ಗೆ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದ್ದು ನ್ಯಾಯಬೆಲೆ ಅಂಗಡಿ ಮಾಲೀಕನ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಈ ವೇಳೆ ಗ್ರಾಮಸ್ಥರು ಹಾಗೂ ನ್ಯಾಯಬೆಲೆ ಅಂಗಡಿ ಮಾಲೀಕನ ನಡುವೆ ಮಾತಿನ ಚಕಮಕಿ ನಡೆಯಿತು. ಇನ್ನೂ ಸ್ಥಳಕ್ಕೆ ಆಹಾರ ಇಲಾಖೆ ಸಿಬ್ಬಂದಿ ನಲ್ಲಕದಿರೆನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ನ್ಯಾಯಬೆಲೆ ಅಂಗಡಿ ಮಾಲಿಕ ಶ್ರೀನಿವಾಸ್ ನ್ಯಾಯಬೆಲೆ ಅಂಗಡಿಯಿಂದ 34 ಮೂಟೆಗಳಷ್ಟು ಪಡಿತರ ರಾಗಿಯನ್ನು ತನ್ನ ಮನೆಗೆ ಸಾಗಿಸಿಕೊಂಡು ಸರ್ಕಾರಕ್ಕೆ ವಂಚನೆ ಮಾಡಿದ್ದು. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಿಬ್ಬಂದಿ ಕದ್ದು ಸಾಗಿಸುತ್ತಿದ್ದ ರಾಗಿ ಮೂಟೆಗಳನ್ನು ಜಪ್ತಿ ಮಾಡಿ ಕೊಂಡು ಅಂಗಡಿ ಮಾಲೀಕ ಶ್ರೀನಿವಾಸ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.
ಈ ವಿಷಯದ ಬಗ್ಗೆ ಪ್ರತಿಕ್ರಿಯಿಸಿದ ಶ್ರೀನಿವಾಸ್ ಮಳೆಯಿಂದ ನ್ಯಾಯಬೆಲೆ ಅಂಗಡಿ ಸೋರಿಕೆಯಾಗುತ್ತಿದೆ ಆ ಕಾರಣ ರಾಗಿ ಮೂಟೆಗಳನ್ನ ಮನೆಯಲ್ಲಿ ಇಟ್ಟಿರುವುದಾಗಿ ಉಡಾಫೆ ಉತ್ತರ ನೀಡಿದ್ದು. ಕೊಡಲೇ ಇಂತಹ ವಂಚಕ ನ್ಯಾಯಬೆಲೆ ಅಂಗಡಿ ಮಾಲೀಕರಿಗೆ ವಿರುದ್ಧ ಕ್ರಮ ಕೈಗೊಂಡು ಇಂತಹ ಪ್ರಕರಣಗಳು ಮರುಕಳಿಸದಂತೆ ಅಧಿಕಾರಿಗಳು ಎಚ್ಚರ ವಹಿಸಬೇಕು ನಾಗರೀಕರು ಒತ್ತಾಯಿಸಿದ್ದಾರೆ .
PublicNext
02/10/2022 11:04 am