ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಾಮರಾಜನಗರ: ಕಾಲೆಳೆದವರ ತಲೆ ಮೇಲೆ ಕಾಲಿಟ್ಟು ಮತ್ತೆ ಬರ್ತೀನಿ - ಮಾಜಿ ಸಂಸದ ಪ್ರತಾಪ್ ಸಿಂಹ

ಚಾಮರಾಜನಗರ : ಮುಂಬರುವ ದಿನಗಳಲ್ಲಿ ನನ್ನ ಕಾಲೆಳೆದವರ ತಲೆ ಮೇಲೆ ಕಾಲಿಟ್ಟು ನಾನು ಮತ್ತೆ ಮೇಲೆ ಬರ್ತೀನಿ ಎಂದು ಮೈಸೂರಿನ ಮಾಜಿ ಸಂಸದ ಪ್ರತಾಪ್ ಸಿಂಹ ಗುಡುಗಿದ್ದಾರೆ.

ಕೊಳ್ಳೇಗಾಲದ ಖಾಸಗಿ ಕಲ್ಯಾಣ ಮಂಟಪದಲ್ಲಿ ದೇವಾಂಗ ಸಂಘವು ಆಯೋಜಿಸಿದ್ದ ಪ್ರತಿಭಾ ಪುರಸ್ಕಾರದಲ್ಲಿ ಮಾತನಾಡಿದ ಅವರು, ಮೈಸೂರು ಸಂಸದನಾಗಿ 10 ವರ್ಷಗಳ‌ ಕಾಲ ಉತ್ತಮ‌ ಕೆಲಸ ಮಾಡಿದೆ. ಯಾವ ಕಾಂಟ್ರಾಕ್ಟರ್ ಹತ್ತಿರವೂ ಕೈ ಚಾಚಲಿಲ್ಲ. ಯಾವ ರಿಯಲ್ ಎಸ್ಟೇಟ್ ಕೂಡ ಮಾಡಲಿಲ್ಲ. ಆದರೆ, ರಾಜಕಾರಣದಲ್ಲಿ ಒಮ್ಮೊಮ್ಮೆ ಒಳ್ಳೆಯನತಕ್ಕೆ ಮನ್ನಣೆ ಸಿಗುವುದಿಲ್ಲ ಎಂದರು.

ರಾಜಕಾರಣದಲ್ಲಿ ಕೆಲವೊಮ್ಮೆ ಕಾಲೆಳೆಯುವವರ ಕೈ ಮೇಲಾಗುತ್ತದೆ.‌ ನನಗೆ ಈಗ ಸ್ವಲ್ಪ ಮಟ್ಟಿಗೆ ಹಿನ್ನಡೆ ಆಗಿದೆ. ಆದರೆ, ನನ್ನ ರಕ್ತದಲ್ಲೇ ಹೋರಾಟದ ಗುಣ ಇದೆ. ನಾನು ಕಷ್ಟಪಟ್ಟು ಮೇಲೆ ಬಂದವನು. ಒಂದಲ್ಲ‌ ಒಂದು ದಿನ ಕಾಲೆಳೆದವರ ತಲೆ ಮೇಲೆ ಕಾಲಿಟ್ಟು ಮೇಲೆ ಬರ್ತೀನಿ ನೋಡಿ ಎಂದು ಹೇಳಿದರು.

Edited By : PublicNext Desk
PublicNext

PublicNext

08/01/2025 05:08 pm

Cinque Terre

9.27 K

Cinque Terre

0