ಚಾಮರಾಜನಗರ : ಶಾಲಾ ಶೈಕ್ಷಣಿಕ ಪ್ರವಾಸಕ್ಕೆ ತೆರಳಿದ ಸಂದರ್ಭದಲ್ಲಿ ಬಸ್ ಚಾಲನೆ ಮಾಡಿದ್ದ ಸಹ ಶಿಕ್ಷಕರೊಬ್ಬರನ್ನು ಡಿಡಿಪಿಐ ರಾಮಚಂದ್ರ ರಾಜೇಅರಸ್ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.
ಯಳಂದೂರು ತಾಲೂಕಿನ ಗುಂಬಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಹ ಶಿಕ್ಷಕ ವೀರಭದ್ರಸ್ವಾಮಿ ಅಮಾನತುಗೊಂಡವರು. ಶಾಲಾ ಮಕ್ಕಳನ್ನು ಶೈಕ್ಷಣಿಕ ಪ್ರವಾಸಕ್ಕೆ ಕರೆದುಕೊಂಡು ಹೋಗಿದ್ದ ವೇಳೆ ಸಹ ಶಿಕ್ಷಕ ವೀರಭದ್ರಸ್ವಾಮಿ ಬಸ್ ಚಾಲನೆ ಮಾಡಿದ್ದರು. ಶಿಕ್ಷಕ ಬಸ್ ಚಾಲನೆ ಮಾಡಿರುವ ಸಂಬಂಧ ವಿಡಿಯೋ ವೈರಲ್ ಆಗಿತ್ತು. ಶಿಕ್ಷಕ ಬಸ್ ಚಾಲನೆ ಮಾಡಿರುವ ಸಂಬಂಧ ಕದಂಬ ಸೇನೆ ಸಂಘಟನೆಯ ಅಂಬರೀಶ್ ಅವರು ಬಿಒ ಅವರಿಗೆ ದೂರು ನೀಡಿದ್ದರು.
ಬಸ್ ಚಾಲನೆ ಮಾಡಿದ ಸಹ ಶಿಕ್ಷಕ ವೀರಭದ್ರಸ್ವಾಮಿ ಅವರಿಗೆ ನೋಟಿಸ್ ಜಾರಿ ಮಾಡಲಾಗಿತ್ತು. ವಿಚಾರಣೆ ವೇಳೆ ಶಿಕ್ಷಕ ಬಸ್ ಚಾಲನೆ ಮಾಡಿರುವುದು ಮೇಲ್ನೋಟಕ್ಕೆ ಕಂಡು ಬಂದ ಹಿನ್ನೆಲೆಯಲ್ಲಿ, ಸೇವಾ ನಡತೆ ಉಲ್ಲಂಘನೆ ಮಾಡಿರುವ ಆರೋಪದಡಿ ಸಹ ಶಿಕ್ಷಕ ವೀರಭದ್ರಸ್ವಾಮಿ ಅವರನ್ನು ಅಮಾನತುಗೊಳಿಸಿ, ಅಮಾನತ್ತಿನ ಅವಧಿಯಲ್ಲಿ ಕೇಂದ್ರ ಸ್ಥಾನವನ್ನು ಬಿಟ್ಟು ಯಾವುದೇ ಸರ್ಕಾರಿ ಅಥವಾ ಅರೆ ಸರ್ಕಾರಿ ಉದ್ಯೋಗದಲ್ಲಿ ತೊಡಗುವಂತಿಲ್ಲ ಎಂದು ಡಿಡಿಪಿಐ ರಾಮಚಂದ್ರ ರಾಜೇಅರಸ್ ಆದೇಶ ಹೊರಡಿಸಿದ್ದಾರೆ.
Kshetra Samachara
04/02/2025 04:46 pm