ನವದೆಹಲಿ: ಭಾರತದಲ್ಲಿ ಟೆಲಿಕಾಂ ಸೇವೆಗಳನ್ನು ನೀಡಲು ಅದಾನಿ ಡೇಟಾ ನೆಟ್‌ವರ್ಕ್‌ಗೆ ಏಕೀಕೃತ ಪರವಾನಗಿ ನೀಡಲಾಗಿದೆ ಎಂದು ವರದಿಯಾಗಿದೆ.
ಕಂಪನಿಯು ಇತ್ತೀಚಿನ 5G ಸ್ಪೆಕ್ಟ್ರಮ್ ಹರಾಜಿನಲ್ಲಿ 26GHz ಮಿಲಿಮೀಟರ್ ವೇವ್ ಬ್ಯಾಂಡ್‌ನಲ್ಲಿ 400MHz ಸ್ಪೆಕ್ಟ್ರಮ್ ಅನ್ನು 20 ವರ್ಷಗಳ ಕಾಲ ₹212 ಕೋಟಿಗೆ ಖರೀದಿಸಿದೆ. ಆದರೆ ಪರವಾನಗಿ ಪಡೆದಿರುವ ಕುರಿತು ಅದಾನಿ ಗ್ರೂಪ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. 5G ಸ್ಪೆಕ್ಟ್ರಮ್ ಅನ್ನು ಖರೀದಿಸುವಾಗ, ಕಂಪನಿಯು ಈ ಸ್ಪೆಕ್ಟ್ರಂ ಅನ್ನು ಆಂತರಿಕ ವ್ಯಾಪಾರ ಚಟುವಟಿಕೆಗಳಿಗೆ ಬಳಸುವುದಾಗಿ ಹೇಳಿತ್ತು. ಅದಾನಿ ಗ್ರೂಪ್ ತನ್ನ ಡೇಟಾ ಸೆಂಟರ್‌ಗಳಿಗೆ ಏರ್‌ವೇವ್‌ಗಳನ್ನು ಬಳಸಲು ಯೋಜಿಸುತ್ತಿದೆ ಮತ್ತು ಸೂಪರ್ ಅಪ್ಲಿಕೇಶನ್‌ಗೆ ತನ್ನ ವ್ಯವಹಾರಗಳನ್ನು ಬೆಂಬಲಿಸುತ್ತದೆ ಎಂದು ಹೇಳಿದೆ.
ಈ ಮೂಲಕ ಈಗ ಗೌತಮ್ ಅದಾನಿ ನೇತೃತ್ವದ ಅದಾನಿ ಗ್ರೂಪ್ ದೇಶಾದ್ಯಂತ ಎಲ್ಲಾ ರೀತಿಯ ಟೆಲಿಕಾಂ ಸೇವೆಗಳನ್ನು ಒದಗಿಸಬಹುದು. ಟೆಲಿಕಾಂ ಸೇವೆ ಒದಗಿಸಲು ಅದಾನಿ ಡೇಟಾ ನೆಟ್‌ವರ್ಕ್ ಈಗಾಗಲೇ ಪರವಾನಗಿಯನ್ನೂ ಪಡೆದಿದೆ. ಹೀಗಾಗಿ ಅದಾನಿ ಗ್ರೂಪ್ ಅಧಿಕೃತವಾಗಿ ಟೆಲಿಕಾಂ ಕ್ಷೇತ್ರ ಪ್ರವೇಶಿಸುವ ಸಾಧ್ಯತೆಗಳು ಹೆಚ್ಚಿವೆ.
PublicNext
12/10/2022 11:05 am