ನವದೆಹಲಿ: ಜಾಗತಿಕ ಮಟ್ಟದಲ್ಲಿ ಕಂಡು ಬಂದಿರುವ ಮಾರಾಟದ ಕಾರಣಕ್ಕೆ ನಿಫ್ಟಿ 50 ಒಂದಿಷ್ಟು ನಷ್ಟದೊಂದಿಗೆ 17,156.3ರಲ್ಲಿ ಸೋಮವಾರದ ವಹಿವಾಟು ಪ್ರಾರಂಭಿಸಿತು.
ಇಂದು (ಸೋಮವಾರ) ಮಧ್ಯಾಹ್ನ 12:30ರ ವೇಳೆಗೆ ನಿಫ್ಟಿ 50ಯು 247.50 ಅಂಕ ಕುಸಿತ ಕಂಡು 17,114.10ರಲ್ಲಿ ವಹಿವಾಟು ನಡೆಸುತ್ತಿದೆ. ಇನ್ನು ಸೆನ್ಸೆಕ್ಸ್ 735 ಪಾಯಿಂಟ್ ಕುಸಿತ ಕಂಡಿದೆ. ಇತ್ತ ನಿಫ್ಟಿ ಮಿಡ್-ಕ್ಯಾಪ್ 100 ಸೂಚ್ಯಂಕ ಶೇ. 3.43ರಷ್ಟು ಭಾರೀ ಕುಸಿತ ಕಂಡಿದ್ದರೆ, ಎಸ್&ಪಿ ನಿಫ್ಟಿ ಸ್ಮಾಲ್-ಕ್ಯಾಪ್ 100 ಸೂಚ್ಯಂಕ ಶೇ. 3.82ರಷ್ಟು ಇಳಿಕೆ ಕಂಡಿದೆ.
ಇಂತಹ ಬಡ್ಡಿದರ ನೀತಿಯು ಅಮೆರಿಕದ ಆರ್ಥಿಕತೆಯನ್ನು ಹಿಂಜರಿತಕ್ಕೆ ತಳ್ಳಲಿದೆ ಎಂದು ನಿರೀಕ್ಷಿಸಲಾಗಿದೆ. ನಾಸ್ಡಾಕ್ ಕಾಂಪೋಸಿಟ್ ಶೇ. 1.8ರಷ್ಟು ಕುಸಿದಿದ್ದರೆ, ಡೌ ಜೋನ್ಸ್ ಶೇ. 1.62ರಷ್ಟು ಹಾಗೂ ಎಸ್&ಪಿ 500 ಶೇ. 1.72ರಷ್ಟು ಕುಸಿತ ಕಂಡಿದೆ. ಸಾಪ್ತಾಹಿಕ ಆಧಾರದ ಮೇಲೆ, ನಾಸ್ಡಾಕ್ ಕಾಂಪೋಸಿಟ್, ಡೌ ಜೋನ್ಸ್ ಮತ್ತು ಎಸ್&ಪಿ 500 ಅನುಕ್ರಮವಾಗಿ ಶೇ. 5.03, ಶೇ. 4 ಮತ್ತು ಶೇ. 4.8ರಷ್ಟು ಕುಸಿದಿವೆ.
PublicNext
26/09/2022 12:44 pm