ಬೆಂಗಳೂರು: ಮೂನ್ಲೈಟಿಂಗ್ ಹಿನ್ನೆಲೆಯಲ್ಲಿ ಐಟಿ ಕ್ಷೇತ್ರದ ದಿಗ್ಗಜ ಕಂಪನಿಗಳಲ್ಲಿ ಒಂದಾಗಿರುವ ವಿಪ್ರೊ ತನ್ನ 300 ಉದ್ಯೋಗಿಗಳನ್ನು ವಜಾಗೊಳಿಸಿದೆ. ಈ ಸಂಬಂಧ ಕಂಪನಿಯ ಚೇರ್ಮನ್ ರಿಷದ್ ಪ್ರೇಮ್ಜಿ ಬುಧವಾರ ಮಾಹಿತಿ ಹೊರಗೆಡಹಿದ್ದಾರೆ.
ಆಲ್ ಇಂಡಿಯಾ ಮ್ಯಾನೇಜ್ಮೆಂಟ್ ಅಸೋಸಿಯೇಷನ್ (ಎಐಎಂಎ) ಹಮ್ಮಿಕೊಂಡಿದ್ದ ನ್ಯಾಷನಲ್ ಮ್ಯಾನೇಜ್ಮೆಂಟ್ ಕನ್ವೆನ್ಷನ್ನಲ್ಲಿ ಮಾತನಾಡಿದ ರಿಷದ್ ಪ್ರೇಮ್ಜಿ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ. 'ಮೂನ್ಲೈಟ್'ನಲ್ಲಿ ತೊಡಗಿದ್ದ ಆರೋಪದ ಮೇಲೆ ಈ ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕಲಾಗಿದೆ. ವಿಪ್ರೋದಲ್ಲಿ ಅಂತಹವರಿಗೆ ಜಾಗವಿಲ್ಲ, ನಂತರ ಆ ಉದ್ಯೋಗಿಗಳನ್ನು ಕಂಪನಿಯಿಂದ ವಜಾಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.
Moonlighting ಅಂದ್ರೆ ಏನು?:
ಒಂದು ಕಂಪನಿಯಲ್ಲಿ ಕೆಲಸ ಮಾಡುವ ಉದ್ಯೋಗಿಗಳು ತಮ್ಮ ಕೆಲಸದ ಅವಧಿ ಮುಗಿದ ನಂತರ ಮತ್ತೊಂದು ಕಂಪನಿಯಲ್ಲಿ ಕೆಲಸ ಮಾಡುವುದನ್ನು ಮೂನ್ ಲೈಟಿಂಗ್ ಎಂದು ಹೇಳಿಕೊಳ್ಳುತ್ತಾರೆ. ಕೊರೊನಾ ಸಮಯದಲ್ಲಿ ಹೆಚ್ಚು ಪ್ರಚಲಿತದಲ್ಲಿದ್ದ ವರ್ಕ್ ಫ್ರಂ ಹೋಮ್ ಪದ್ಧತಿಯನ್ನು ಕೆಲವರು ದುರ್ಬಳಕೆ ಮಾಡಿಕೊಂಡಿರುವುದು ಐಟಿ ಕ್ಷೇತ್ರದಲ್ಲಿ ಇತ್ತೀಚೆಗೆ ದೊಡ್ಡ ಪ್ರಮಾಣದಲ್ಲಿ ಬೆಳಕಿಗೆ ಬಂದಿತ್ತು. ಹೀಗೆ ಒಂದು ಸಂಸ್ಥೆಯಲ್ಲಿ ಉದ್ಯೋಗಿ ಆಗಿದ್ದುಕೊಂಡೂ ಇನ್ನೊಂದು ಕಂಪನಿಗೂ ಕೆಲಸ ಮಾಡುವುದನ್ನು 'ಮೂನ್ಲೈಟ್'’ ಎಂದು ಹೇಳಲಾಗುತ್ತಿದೆ.
PublicNext
21/09/2022 10:45 pm