ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೈಜುಸ್ ಗೆ ಪ್ರಸಕ್ತ ಆರ್ಥಿಕ ವರ್ಷದಲ್ಲಿ ₹4,500 ಕೋಟಿ ರೂ ನಷ್ಟ ; ಸಿಇಓ ಹೇಳಿದ್ದೇನು!

ಬೈಜುಸ್ ಭಾರತದ ಶಿಕ್ಷಣ ಕ್ಷೇತ್ರದಲ್ಲಿ ನವೋದ್ಯಮದಲ್ಲಿ ತನ್ನದೆ ಆದ ಛಾಪು ಮೂಡಿಸಿದ ಬೃಹತ್ ಕಂಪನಿ. ಕಳೆದ ಎರಡು ವರ್ಷಗಳ ಹಿಂದೆ ಈ ನವೋದ್ಯಮದ ಕಂಪನಿ ತನ್ನ ವಾರ್ಷಿಕ ನಿವ್ವಳ ಲಾಭದಿಂದ ದೇಶದ ಎಲ್ಲ ಶ್ರೀಮಂತರು ಇತ್ತಕಡೆ ನೋಡುವಂತೆ ಮಾಡಿತ್ತು.

ಆದರೆ ಈಗ ಇದೇ ವಿಷಯಕ್ಕೆ ಎಲ್ಲರ ಆಶ್ಚರ್ಯ ಪಡುವಂತ ಸಂಗತಿಯನ್ನ ಸ್ವತಃ ಬೈಜುಸ್ ಸಿಇಓ ರವೀಂದ್ರನ್ ಹೊರಹಾಕಿದ್ದಾರೆ.

ಮನಿ ಕಂಟ್ರೋಲ್ ಎಂಬ ವೆಬ್ ನ್ಯೂಸ್ ಸಂದರ್ಶನದಲ್ಲಿ ಮಾತನಾಡಿದ ಅವರು ಕಳೆದ ಆರು ತಿಂಗಳು ನನ್ನ ಜೀವಮಾನದ ಕಷ್ಟಕರ ದಿನಗಳು ಈ ದಿನಗಳಲ್ಲಿ ನಾನು ನಿದ್ದೆಯನ್ನು ಮಾಡಲಾಗಿಲ್ಲ. ಕಾರಣ ಕಳೆದ ಆರ್ಥಿಕ ವರ್ಷಗಳ ಲಾಭಕ್ಕಿಂತ ಈ ಬಾರಿ ಪ್ರಸಕ್ತ ಆರ್ಥಿಕ ವರ್ಷದಲ್ಲಿ ನಮ್ಮ ಕಂಪನಿಯು ಶೇಕಡಾ 17% ರಷ್ಟು ಲಾಭದಲ್ಲಿ ಕುಸಿತಕೊಂಡಿದೆ. ಕಳೆದ ವರ್ಷಗಳಲ್ಲಿ 262 ಕೋಟಿ ರೂ ಕುಸಿತ ಕಂಡಿದ್ದರೆ ಈ ಬಾರಿ 4,588 ಕೋಟಿ ರೂ ಕುಸಿತ ಕಂಡಿದ್ದು ಶೇಖಡಾ ಕಳೆದ ವರ್ಷದಕ್ಕಿಂತ 40% ಕುಸಿತ ಕಂಡಿದೆ ಎಂದು ಹೇಳಿದ್ದಾರೆ. ಇದಕ್ಕೆ ಮುಖ್ಯ ಕಾರಣ ಕಂಪನಿಯ ಆರ್ಥಿಕತೆಯ ನಿರ್ವಹಣೆಗಾಗಿ ತಂದಂತಹ ಅತಿಯಾದ ಯೋಜನೆಗಳು ಅವುಗಳೇ ಈಗ ಮುಳುವಾಗಿವೆ ಎಂದು ಹೇಳಿದ್ದಾರೆ.

Edited By : Nirmala Aralikatti
PublicNext

PublicNext

15/09/2022 12:09 pm

Cinque Terre

21.94 K

Cinque Terre

1

ಸಂಬಂಧಿತ ಸುದ್ದಿ