ದೇಶಾದ್ಯಂತ ಕೋವಿಡ್ ಇಳಿಮುಖದ ನಂತರ ಟಾಟಾ ಕನ್ಸಲ್ಟನ್ಸಿ ಸರ್ವಿಸಸ್ ಸಂಸ್ಥೆಯು ಕಚೇರಿಯಿಂದಲೇ ಕೆಲಸ ಆರಂಭಿಸಲು ತನ್ನ ಹಿರಿಯ ಉದ್ಯೋಗಿಗಳಿಗೆ ನಿರ್ದೇಶನ ನೀಡಿದೆ. ಇಲ್ಲಿಯವರೆಗೆ ಸಂಸ್ಥೆಯು ತನ್ನ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡುವ ಅವಕಾಶ ನೀಡಿತ್ತು.
ಹಿರಿಯ ಉದ್ಯೋಗಿಗಳ ನಂತರ ಹಂತಹಂತವಾಗಿ ಇತರ ಉದ್ಯೋಗಿಗಳನ್ನೂ ಕಚೇರಿಯಿಂದಲೇ ಕೆಲಸ ಮಾಡಿಸಲು ಟಾಟಾ ಕನ್ಸಲ್ಟನ್ಸಿ ನಿರ್ಧರಿಸಿದೆ. ಕೋವಿಡ್ ನಂತರದ ದಿನಗಳಲ್ಲಿ ಕಚೇರಿಯಿಂದಲೇ ಕೆಲಸ ಆರಂಭಿಸಿದ ದೊಡ್ಡ ಕಂಪನಿಗಳಲ್ಲಿ ಟಾಟಾ ಕನ್ಸಲ್ಟನ್ಸಿ ಕೂಡ ಒಂದಾಗಿದೆ.
ಈಗಾಗಲೇ ಸಂಸ್ಥೆಯ ಕಚೇರಿಗಳು ಕಾರ್ಯಾರಂಭ ಮಾಡಿವೆ. ಹಂತ ಹಂತವಾಗಿ ಇತರ ಉದ್ಯೋಗಿಗಳಿಗೆ ಕಚೇರಿಯಿಂದಲೇ ಕೆಲಸ ನೀಡಲಿದ್ದೇವೆ. ಎಲ್ಲ ಉದ್ಯೋಗಿಗಳು 'ಆಫೀಸ್ ಮೋಡ್'ಗೆ ಬರಬೇಕಿದೆ ಎಂದು ಟಾಟಾ ಕನ್ಸಲ್ಟನ್ಸಿ ಸರ್ವಿಸಸ್‌ನ ಮುಖ್ಯ ಕಾರ್ಯನಿರ್ವಣಾ ಅಧಿಕಾರಿ ಹಾಗೂ ವ್ಯವಸ್ಥಾಪಕ ನಿರ್ದೇಶಕ ಗೋಪಿನಾಥನ್ ಹೇಳಿದ್ದಾರೆ.
PublicNext
27/08/2022 01:29 pm