ಕೊರಟಗೆರೆ: ಬೆಂಬಿಡದ ರಣ ಮಳೆ ಒಂದೆಡೆ, ಬೆಲೆಯೇರಿಕೆ ಮತ್ತೊಂದೆಡೆ, ಆದರೂ ವರಮಹಾಲಕ್ಷ್ಮಿ ಹಬ್ಬಕ್ಕೆ ಯಾವುದೇ ತಡೆಯಿಲ್ಲ, ಹಬ್ಬ ಮಾಡುವುದನ್ನು ನಿಲ್ಲಿಸಲು ಸಾಧ್ಯವೇ ಇಲ್ಲ ಎನ್ನುವ ರೀತಿ ಕೊರಟಗೆರೆ ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿ ಇರುವಂತಹ ನಿತ್ಯದ ಮಾರುಕಟ್ಟೆಯಲ್ಲಿ ಹಬ್ಬ ಆಚರಣೆಗೆ. ಬೇಕಾಗಿರುವಂತಹ ಹೂವು, ಹಣ್ಣು, ತರಕಾರಿ ಸೇರಿದಂತೆ ಹಲವು ಅಗತ್ಯ ವಸ್ತುಗಳನ್ನು ಖರೀದಿಯಲ್ಲಿ ಗ್ರಾಹಕರು ತೊಡಗಿದ್ದರು.
ಎಂತಹದ್ದೇ ಕಷ್ಟ ಇದ್ದರೂ ಲಕ್ಷ್ಮಿ ಹಬ್ಬ ಆಚರಣೆ ನಿಲ್ಲಿಸಬಾರದು ಎನ್ನುವ ಹಿನ್ನೆಲೆಯಲ್ಲಿ ಹಬ್ಬದ ತಯಾರಿ ಎಲ್ಲೆಡೆ ಕಾಣುತ್ತಿತ್ತು.
ವರದಿ: ರಾಘವೇಂದ್ರ ದಾಸರಹಳ್ಳಿ, ಪಬ್ಲಿಕ್ ನೆಕ್ಸ್ಟ್
PublicNext
04/08/2022 10:51 pm