ಸ್ವತಂತ್ರ ಭಾರತದ ಇತಿಹಾಸದಲ್ಲೇ ಮೊದಲ ಬಾರಿಗೆ ಡಾಲರ್ ಮೌಲ್ಯವು 80 ರೂ. ಗಡಿ ದಾಟಿದೆ. ಕಳೆದ ಮೂರು ದಿನಗಳಿಂದ ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿಯುತ್ತಲೇ ಇದೆ. ಈಗ ಮತ್ತೆ ಜುಲೈ 13ನೇ ತಾರೀಖಿನಂದು 7 ಪೈಸೆ ಕುಸಿತ ಕಂಡಿದ್ದು, ಡಾಲರ್ ಎದುರು ರೂಪಾಯಿ ಮೌಲ್ಯ 80.02ಕ್ಕೆ ಇಳಿಕೆಯಾಗಿದೆ.
ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಗಣನೀಯವಾಗಿ ಬ್ಯಾರೆಲ್‌ಗೆ 100 ಡಾಲರ್ ಸಮೀಪ ಕುಸಿದಿದೆ. ಈ ಮಧ್ಯೆ ರೂಪಾಯಿ ಮೌಲ್ಯದ ಕುಸಿತ ಮುಂದುವರಿದಿದೆ. ಭಾರತದಲ್ಲಿರೋ ಹೂಡಿಕೆ ಮಾಡಿರುವ ಹಣವನ್ನು ವಿದೇಶಿ ಸಂಸ್ಥೆಗಳು ವಾಪಸ್ಸು ಪಡೆಯುತ್ತಿರೋದೇ ಇದಕ್ಕೆ ಪ್ರಮುಖ ಕಾರಣವಾಗಿದೆ.
PublicNext
14/07/2022 07:39 pm