ಮುಂಬೈ: ದೇಶದ ಅತಿ ದೊಡ್ಡ ವಿಮಾ ಸಂಸ್ಥೆ ಮತ್ತು ಅತಿ ದೊಡ್ಡ ದೇಶೀಯ ಹಣಕಾಸು ಹೂಡಿಕೆದಾರರಾದ ಭಾರತೀಯ ಜೀವ ವಿಮಾ ನಿಗಮದ (ಎಲ್‌ಐಸಿ) ಷೇರುಗಳು ಶೇ 2.86ರಷ್ಟು ಕುಸಿದು ದಾಖಲೆಯ ಕನಿಷ್ಠ ಮಟ್ಟಕ್ಕೆ ತಲುಪಿದೆ. ಷೇರುಗಳು ರೂಪಾಯಿ 777.40ರ ದಾಖಲೆಯ ಕನಿಷ್ಠ ಮಟ್ಟಕ್ಕೆ ಕುಸಿದಿವೆ.
ಬಿಎಸ್‌ಇ ಸೂಚ್ಯಂಕದಲ್ಲಿ ಷೇರುಗಳು ಸಾರ್ವಕಾಲಿಕ ಕುಸಿತವನ್ನು ಕಂಡಿದೆ. ಬಿಎಸ್‌ಇ ಸೂಚ್ಯಂಕದಲ್ಲಿ ಷೇರುಗಳು ಕನಿಷ್ಠ ರೂಪಾಯಿ 775.40ಕ್ಕೆ ತಲುಪಿದೆ. ಇನ್ನು ಎನ್‌ಎಸ್‌ಇಯಲ್ಲಿ ಎಲ್‌ಐಸಿ ಶೇ.2.97 ರಷ್ಟು ಕುಸಿತ ಕಂಡು 776.50ಕ್ಕೆ ತಲುಪಿದೆ.
ಎಲ್‌ಐಸಿಯು ಆರಂಭದಲ್ಲಿ ರೂಪಾಯಿ 949 ವಿತರಣೆ ಬೆಲೆಯನ್ನು ಗೊತ್ತು ಮಾಡಿತ್ತು. ಆದರೆ ಈ ಬೆಲೆಯಿಂದ ಎಲ್‌ಐಸಿ ಷೇರುಗಳು ಪ್ರಸ್ತುತ ಶೇಕಡ 18.08 ರಷ್ಟು ಕುಸಿತ ಕಂಡಿದೆ. ಅರ್ಧ ತಿಂಗಳಲ್ಲಿ ಹೂಡಿಕೆದಾರರಿಗೆ ಬರೋಬ್ಬರಿ 1.08 ಲಕ್ಷ ಕೋಟಿ ರೂ. ನಷ್ಟ ಉಂಟಾಗಿದೆ.
PublicNext
07/06/2022 03:46 pm