ನವದೆಹಲಿ: ದೇಶದಲ್ಲಿ ಚಿನ್ನ, ಬೆಳ್ಳಿಯ ಬೆಲೆಯು ನಿನ್ನೆಗಿಂತ ಇಂದು ಏರಿಕೆಯಾಗಿದೆ. ನಿನ್ನೆ ಒಂದು ಗ್ರಾಂ ಆಭರಣದ ಚಿನ್ನದ ಬೆಲೆ ರೂ. 4,774 ಇದ್ದದ್ದು ಇಂದು 4,785 ರೂಪಾಯಿಗೆ ಏರಿದೆ. ಈ ಮೂಲಕ ಪ್ರತಿ ಗ್ರಾಂ ಬೆಲೆಯಲ್ಲಿ 11 ರೂ. ಏರಿಕೆಯಾಗಿದೆ.
ಹತ್ತು ಗ್ರಾಂ ತೂಕದ 22 ಕ್ಯಾರಟ್ ಆಭರಣ ಚಿನ್ನದ ಬೆಲೆ 47,850 ರೂ. ಇದ್ದರೆ, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) 52,200 ರೂ. ನಿಗದಿಯಾಗಿದೆ. ರಾಜಧಾನಿ ನಗರ ಬೆಂಗಳೂರಿನಲ್ಲಿ ಇಂದು 22 ಕ್ಯಾರಟ್‌ನ 10 ಗ್ರಾಂ ಬಂಗಾರದ ಬೆಲೆ 47,850 ರೂ. ಆಗಿದ್ದರೆ ಚೆನ್ನೈ, ಮುಂಬೈ ಹಾಗೂ ಕೋಲ್ಕತ್ತಾ ನಗರಗಳಲ್ಲಿ ಕ್ರಮವಾಗಿ ಇದರ ಬೆಲೆ ರೂ. 47,900, ರೂ. 47,850, ರೂ. 47,850 ಆಗಿದೆ. ದೇಶದ ರಾಜಧಾನಿ ದೆಹಲಿಯಲ್ಲಿ ಇಂದು ಚಿನ್ನದ ಬೆಲೆ 47,850 ರೂ. ಆಗಿದೆ.
ಒಂದು ವಾರದಿಂದ ಭಾರತದಲ್ಲಿ ಬೆಳ್ಳಿ ದರದಲ್ಲಿ ಏರಿಳಿತ ಕಂಡುಬಂದಿದೆ. ನಿನ್ನೆಗೆ ಹೋಲಿಸಿದರೆ ಇಂದು ಬೆಳ್ಳಿ ದರದಲ್ಲಿ ಅತ್ಯಲ್ಪ ಏರಿಕೆ ಕಂಡುಬಂದಿದೆ. ಪ್ರಸ್ತುತ ಬೆಂಗಳೂರು ನಗರದಲ್ಲಿ ಇಂದು 1ಕೆಜಿ ಬೆಳ್ಳಿ ದರವು 68,500 ರೂ. ಆಗಿದೆ. ಇನ್ನುಳಿದಂತೆ ಚೆನ್ನೈನಲ್ಲಿ ಒಂದು ಕೆಜಿ ಬೆಳ್ಳಿ ದರ ರೂ. 68,500 ಆಗಿದ್ದರೆ, ದೆಹಲಿಯಲ್ಲಿ 62,400 ರೂ., ಮುಂಬೈನಲ್ಲಿ 62,400 ರೂ. ಹಾಗೂ ಕೋಲ್ಕತ್ತಾದಲ್ಲೂ 62,400 ರೂ. ಗಳಾಗಿದೆ.
PublicNext
07/06/2022 08:22 am