ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಣ್ಣು ಕೊಯ್ಯುವ ಟೆಕ್ನಿಕ್‌ಗೆ ಫಿದಾ ಆದ ಆನಂದ್ ಮಹೀಂದ್ರಾ !

ಮುಂಬೈ: ಉದ್ಯಮಿ ಆನಂದ್ ಮಹೀಂದ್ರಾ ಆಗಾಗ ಒಳ್ಳೆ ವಿಚಾರದ ವೀಡಿಯೋಗಳನ್ನ ಶೇರ್ ಮಾಡ್ತಾರೆ. ಅದರಂತೆ ಈಗ ಹಣ್ಣು ಕೊಯ್ಯುವ ಉಪಕರಣದ ವೀಡಿಯೋವೊಂದರ ವೀಡಿಯೋ ಶೇರ್ ಮಾಡಿ, "ಅದ್ಭುತ ಎನ್ನಬಹುದಾದ ಅವಿಷ್ಕಾರ" ಎಂದೂ ಕೂಡ ಬಣ್ಣಿಸಿದ್ದಾರೆ.

ಈ ವಿಶಿಷ್ಟ ಉಪಕರಣ ನಿಜಕ್ಕೂ ವಿಶೇಷವಾಗಿಯೇ ಇದೆ. ದೊಡ್ಡ ಕೋಕ್ ಬಾಟಲ್,ಸ್ಟ್ರಿಂಗ್, ಪಿವಿಸಿ ಪೈಪ್‌ಗಳನ್ನ ಬಳಸಿ ಈ ಒಂದು ಉಪಕರಣ ತಯಾರಿಸಲಾಗಿದೆ.

ಇದರಿಂದ ಮರದಲ್ಲಿರೋ ಹಣ್ಣುಗಳನ್ನ ತುಂಬಾ ಸುಲಭವಾಗಿಯೇ ಕೀಳ ಬಹುದಾಗಿದ್ದು ಈ ಒಂದು ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ಈಗಾಗಲೇ ಹರಿದಾಡುತ್ತಿದೆ. ಇದನ್ನ ಕಂಡ ಉದ್ಯಮಿ ಆನಂದ್ ಮಹೀಂದ್ರಾ ಮೆಚ್ಚಗೆ ವ್ಯಕ್ತಪಡಿಸಿ ತಮ್ಮ ಟ್ವಿಟರ್ ಖಾತೆಯಲ್ಲೂ ಹಂಚಿಕೊಂಡಿದ್ದಾರೆ.

Edited By :
PublicNext

PublicNext

06/06/2022 01:50 pm

Cinque Terre

47.94 K

Cinque Terre

2

ಸಂಬಂಧಿತ ಸುದ್ದಿ