ನವದೆಹಲಿ: ಒಮ್ನಿ ರೀತಿಯಲ್ಲಿ ಇದೀಗ ಮಾರುತಿ ಇಕೋ ಜನಪ್ರಿಯತೆ ಪಡೆದುಕೊಂಡಿದೆ. ಯಶಸ್ಸಿನ ಅಲೆಯಲ್ಲಿರುವ ಇಕೋ ಇದೀಗ ಹೊಸ ರೂಪದಲ್ಲಿ ಬಿಡುಗಡೆಯಾಗಲಿದೆ.
ನೂತನ ಮಾರುತಿ ಇಕೋ ಕಾರಿನಲ್ಲಿ ಮಹತ್ತರ ಬದಲಾವಣೆ ಮಾಡಲಾಗಿದೆ. ಹೆಡ್ ಲ್ಯಾಂಪ್ಸ್ ಹಾಗೂ ಟೈಲ್ಲ್ಯಾಂಪ್ಸ್ ವಿನ್ಯಾಸ ಬದಲಾಯಿಸಲಾಗಿದೆ. ಬಂಪರ್ ವಿನ್ಯಾಸದಲ್ಲೂ ಬದಲಾವಣೆ ಮಾಡಲಾಗಿದ್ದು, ಹೊಸ ಶೈಲಿಯಲ್ಲಿ ಕಾರು ಬಿಡುಗಡೆಯಾಗಲಿದೆ. ಸದ್ಯ ಮಾರುಕಟ್ಟೆಯಲ್ಲಿರುವ ಇಕೋ ಕಾರಿನ ಬೆಲೆ 4.63 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ನೂತನ ಕಾರಿನ ಬೆಲೆ ಕೊಂಚ ಏರಿಕೆಯಾಗುವ ಸಾಧ್ಯತೆ ಇದೆ.
ಸೀಟು ಸಾಮರ್ಥ್ಯದಲ್ಲಿ ಬದಲಾವಣೆ ಇಲ್ಲ, 5 ರಿಂದ 7 ಸೀಟನ್ ಸಾಮರ್ಥ್ಯ ಹೊಂದಿರಲಿದೆ. ಕಾರಿನ ಎಂಜಿನ್ 1.2 ಲೀಟರ್ ಕೆ ಸೀರಿಸ್ ಎಂಜಿನ್ ಬಳಸಲಾಗಿದೆ. ಇದು ವಿವಿಟಿ ಡ್ಯುಯೆಲ್ ಪೆಟ್ರೋಲ್ ಎಂಜಿನ್ ಆಗಿದೆ. ಮಾರುತಿ ಬಲೆನೋ, ವ್ಯಾಗನರ್, ಸ್ವಿಫ್ಟ್ ಕಾರಿನಲ್ಲೂ ಇದೆ ಎಂಜಿನ್ ಬಳಸಲಾಗಿದೆ. ಬಿಎಸ್6 ಎಮಿಷನ್ ಎಂಜಿನ್ ಹಾಗೂ 89BHP ಪವರ್ ಹಾಗೂ 113 NM ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. 5 ಸ್ಪೀಡ್ ಮಾನ್ಯುಯೆಲ್ ಟ್ರಾನ್ಸ್ಮಿಶನ್ ಹೊಂದಿದೆ.
ಹೊಸ ಮಾನದಂಡ ಪ್ರಕಾರ ನೂತನ ಇಕೋ ಬಿಡುಗಡೆ ಶೀಘ್ರದಲ್ಲಿಯೇ ಮಾರುಕಟ್ಟೆಗೆ ಬರಲಿದೆ ಎಂದು ಕಂಪನಿ ತಿಳಿಸಿದೆ.
PublicNext
03/06/2022 11:02 pm