ಮುಂಬೈ : ದೇಶದ ಅತಿ ದೊಡ್ಡ ಮತ್ತು ಪ್ರತಿಷ್ಠಿತ ವಿಮಾ ಕಂಪನಿಯಾದ ಭಾರತೀಯ ಎಲ್.ಐ.ಸಿಯೂ ಷೇರು ಮಾರುಕಟ್ಟೆಯಲ್ಲಿ ಲಿಸ್ಟಿಂಗ್ ಆಗಿದೆ.
ಹೌದು ! ಬಾಂಬೆ ಷೇರು ಮಾರಕಟ್ಟೆಯಲ್ಲಿ ಶೇ.8.62 ರಷ್ಟು ರಿಯಾಯಿತಿ ದರದೊಂದಿಗೆ 867.2 ರೂಪಾಯಿ ಬೆಲೆಯಲ್ಲಿ ಲಿಸ್ಟ್ ಆಗಿದೆ. ಇಂದು ಲಿಸ್ಟ್ ಆಗುವ ಮೂಲಕ ಹೂಡಿಕೆದಾರರು ಷೇರುಗಳನ್ನು ಖರೀದಿ ಮಾಡಲು ಅವಕಾಶ ಸಹ ಕಲ್ಪಿಸಲಾಗಿದೆ.
ಆರಂಭದಲ್ಲಿ ಎಲ್.ಐ.ಸಿ ಷೇರುಗಳು ಭಾರೀ ಏರಿಕೆ ಆಗಲಿದೆ ಎಂದು ಗ್ರೇ ಮಾರ್ಕೆಟ್ ಈ ಮೊದಲೇ ಸುಳಿವು ನೀಡಿತ್ತು. ಆದರೆ ಕಳೆದ ಒಂದು ವಾರದಿಂದ ಗ್ರೇ ಮಾರ್ಕೆಟ್‌ನಲ್ಲಿ ಎಲ್.ಐ.ಸಿ ಷೇರುಗಳ ಬೇಡಿಕೆ ಇಳಿಮುಖವಾದ್ದರಿಂದ ಈಗ ಕಡಿಮೆ ಬೆಲೆಯಲ್ಲಿ ಷೇರು ಲಿಸ್ಟ್ ಆಗಿದೆ.
ಇಂದು ಮಧ್ಯಾಹ್ನದ ವೇಳೆಗೆ 890 ರೂ. ಬೆಲೆಯಲ್ಲಿ ಎಲ್.ಐ.ಸಿ ಷೇರು ಮಾರಾಟವಾಗುತ್ತಿದೆ.
ಕೇಂದ್ರ ಸರ್ಕಾರ ಮೇ 4 ರಂದು ಎಲ್.ಐ.ಸಿ ಷೇರನ್ನು ಬಿಡುಗಡೆ ಮಾಡಿತ್ತು. ಐಪಿಒ ವೇಳೆ ಒಂದು ಷೇರಿಗೆ 949 ರೂಪಾಯಿ ದರ ನಿಗದಿ ಮಾಡಲಾಗಿತ್ತು.
ಈ ಸರ್ಕಾರ ಪಾಲಿಸಿದಾರರಿಗೆ ಮತ್ತು ರಿಟೇಲ್ ಹೂಡಿಕೆದಾರರಿಗೆ ರಿಯಾಯಿತಿ ದರವನ್ನು ಪ್ರಕಟಿಸಿತ್ತು. ಪಾಲಿಸಿದಾರರು 889 ರೂಪಾಮಿ ರಿಟೇಲ್ ಹೂಡಿಕೆದಾರರು 904 ರೂಪಾಯಿ ರಿಯಾಯಿತಿ ದರದಲ್ಲಿ ಷೇರನ್ನು ಖರೀದಿ ಮಾಡಿದ್ದರು. ಐಪಿಒ ಮೂಲಕ 20,557 ಕೋಟಿ ರೂ. ಸಂಗ್ರಹಿಸುವ ಗುರಿಯನ್ನು ಕೇಂದ್ರ ಸರ್ಕಾರ ಹಾಕಿಕೊಂಡಿದೆ.
PublicNext
17/05/2022 01:43 pm