ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್ ಟ್ವಿಟರ್ ಖರೀದಿಸಿದ ಮೇಲೆ ಟ್ವಿಟರ್ ನಲ್ಲಿ ಏನೆಲ್ಲ ಬದಲಾವಣೆ ಆಗುತ್ತವೆ ಅನ್ನೋ ಕುತೂಹಲ ಒಂದು ಕಡೆ ಇದೆ. ಇನ್ನೊಂದು ಕಡೆಗೆ ಟ್ವಿಟರ್ ನಲ್ಲಿ ಈಗಾಗಲೇ ಇರೋ ಪ್ರತಿಭಾವಂತರಲ್ಲಿ ಯಾರನ್ನ ಮನೆಗೆ ಕಳಿಸುತ್ತಾರೋ ಅನ್ನೋ ಆತಂಕದ ಮಾತುಗಳೂ ಕೇಳಿ ಬರುತ್ತವೆ.
ಹೌದು. ಎಲಾನ್ ಮಸ್ಕ್ ಟ್ವಿಟರ್ ಸಿಇಓ ಪರಾಗ್ ಅಗರವಾಲ್ ರನ್ನ ಮನೆಗೆ ಕಳಿಸೋದು ಗ್ಯಾರಂಟಿ ಅನ್ನೋ ಮಾತು ಬಲವಾಗುತ್ತಲೇ ಇವೆ. ಇದರ ಹೊರತಾಗಿ ಇದೇ ಟ್ವಿಟರ್ ನಲ್ಲಿರೋ ವಿಜಯ್ ಗದ್ದೆ ಅವರನ್ನೂ ಎಲಾನ್ ಮಸ್ಕ್ ತೆಗೆದು ಹಾಕಲು ನಿರ್ಧರಿಸಿದ್ದಾರೆ ಅಂತಲೂ ವರದಿ ಆಗಿದೆ.
ಆದರೆ, ಪರಾಗ್ ಅಗರವಾಲ್ ಆಗೇನೂ ಇಲ್ಲ. ಎಲಾನ್ ಮಸ್ಕ್ ಯಾರನ್ನೂ ತೆಗೆದು ಹಾಕೋದಿಲ್ಲ ಅಂತಲೇ ಹೇಳಿಕೊಂಡಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ರಾಯಿಟರ್ಸ್‌ನ ಹೊಸ ವರದಿ ಬೇರೆನೆ ಹೇಳುತ್ತಿದೆ. ಈ ವರ್ಷದ ಕೊನೆಯಲ್ಲಿ 44 ಕೋಟಿ ಶತಕೋಟಿ ಡಾಲರ್ ಮಾರಾಟದ ಒಪ್ಪಂದ ಪೂರ್ಣಗೊಂಡ ನಂತರ ಅಗರವಾಲ್ ರನ್ನ ವಜಾಗೊಳ್ಳಲಿದ್ದಾರೆ. ಆ ಜಾಗಕ್ಕೆ ಬೇರೆಯವರನ್ನ ಎಲಾನ್ ಮಸ್ಕ್ ನೇಮಿಸಿಕೊಂಡಿದ್ದಾರೆ ಅನ್ನೋ ಮಾಹಿತಿನೂ ಇದೆ.
PublicNext
04/05/2022 07:53 am