ಬೆಂಗಳೂರು: ಪೆಟ್ರೋಲ್ ಬೆಲೆ ಏರಿಕೆ ಆಗಿದೆ. ಡೀಸೆಲ್ ಬೆಲೆ ಹೆಚ್ಚಾಗಿದೆ. ಈ ಶಾಕ್ ತಡೆದುಕೊಳ್ಳುವ ಮೊದಲೇ ಈಗ ಜನರಿಗೆ ಏರಿದೆ ತರಕಾರಿ ಬೆಲೆನೂ ಶಾಕ್ ಕೊಟ್ಟಿದೆ.
ಹೌದು. ಬಹುತೇಕ ಎಲ್ಲ ತರಕಾರಿಯ ಬೆಲೆ ಹೆಚ್ಚಾಗಿದೆ. ಇದರಿಂದ ಜನ ನಿಜಕ್ಕೂ ಬೇಸರಪಟ್ಟಿದ್ದಾರೆ. ತೈಲ ಬೆಲೆ ಮೊದಲೇ ಏರಿ ಕುಂತಿದೆ. ಅದರ ಮಧ್ಯೆ ಈಗ ತರಕಾರಿ ಬೆಲೆ ಗಗನಕ್ಕೇರುತ್ತಿದೆ. ಅವುಗಳ ದರ ಇಂತಿದೆ.
ದೆಹಲಿ: ಇಲ್ಲಿ ಪಾಲಕ್ ಸೊಪ್ಪಿಗೇನೆ 40 ರೂಪಾಯಿ ಕೊಡೋ ಪರಿಸ್ಥಿತಿ ಬಂದಿದೆ. ಸೋರೆಕಾಯಿ,ಬೆಂಡೆಕಾಯಿಗಳ ದರವೂ ಏರಿಕೆ ಆಗಿದೆ.
ನಿಂಬೆ ಹಣ್ಣು-ಪ್ರತಿ ಕೆ.ಜಿ. 200-250
ಬೆಂಡೆ ಕಾಯಿ-ಪ್ರತಿ ಕೆ.ಜಿ. 100-120
ಸೋರೆ ಕಾಯಿ-ಪ್ರತಿ ಕೆ.ಜಿ.120-130
ಹೂಕೋಸು- ಪ್ರತಿ ಕೆ.ಜಿ. 40-60
ಈರುಳ್ಳಿ-ಪ್ರತಿ ಕೆ.ಜಿ. 25-30
ಕ್ಯಾರೆಟ್-ಪ್ರತಿ ಕೆ.ಜಿ.40-50
ಬೇಸಿಗೆಯಲ್ಲಿ ತಂಪಾದ ಆಹಾರವನ್ನ ಸೇವಿಸೋಣ ಅನ್ನೋ ಜನ ಈ ರೇಟ್ ಕೇಳಿ ಶಾಕ್ ಆಗಿದ್ದಾರೆ. ನಿಂಬೆ ಹಣ್ಣಿನ ರೇಟ್ ಕೇಳಿ ನಿಜಕ್ಕೂ ಗಾಬರಿನೇ ಆಗ್ತಿದ್ದಾರೆ. ಒಟ್ಟರೆ, ಬೇಸಿಗೆಯಲ್ಲಿ ಜನ ಎಲ್ಲ ರೀತಿಯ ಬೆಲೆ ಏರಿಕೆ ಶಾಕ್ ಅನ್ನ ಎದುರಿಸಲೇಬೇಕಾಗಿದೆ.
PublicNext
04/04/2022 12:51 pm