ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಳೆ ವಾಹನ ನೋಂದಣಿ ನವೀಕರಣ ಶುಲ್ಕ 8 ಪಟ್ಟು ಹೆಚ್ಚಳ

ನವದೆಹಲಿ : ಇದೇ ಏಪ್ರಿಲ್ 1 ರಿಂದ 15 ವರ್ಷದ ಹಳೆಯ ವಾಹನದ ನೋಂದಣಿ ನವೀಕತಣದ ಶುಲ್ಕ 8 ಪಟ್ಟು ಹೆಚ್ಚಳವಾಗಲಿದೆ ಎಂದು

ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ ನಿಯಮ ಜಾರಿಗೊಳಿಸಿದೆ.

ಈ ಹೊಸ ನಿಯಮ ದೆಹಲಿಯಲ್ಲಿ ನೋಂದಣಿಯಾಗಿರುವ ವಾಹನಗಳಿಗೆ ಅನ್ವಯಿಸುವುದಿಲ್ಲ, ಅಲ್ಲಿ 15 ವರ್ಷಕ್ಕಿಂತ ಹಳೆಯದಾದ ಎಲ್ಲಾ ಪೆಟ್ರೋಲ್ ವಾಹನಗಳು ಮತ್ತು 10 ವರ್ಷಕ್ಕಿಂತ ಹಳೆಯದಾದ ಡೀಸೆಲ್ ವಾಹನಗಳು ಮರು ನೋಂದಣಿಗೆ ಅನ್ವಯಿಸುವುದಿಲ್ಲ.

MoRTH ನ ತೀರ್ಪಿನ ಪ್ರಕಾರ, ನಿಮ್ಮ 15 ವರ್ಷ ಹಳೆಯ ಕಾರ್ ನವೀಕರಿಸಲು ಪ್ರಸ್ತುತ 600 ರೂ. ದರಕ್ಕೆ ಹೋಲಿಸಿದರೆ 5,000 ರೂ. ವೆಚ್ಚವಾಗುತ್ತದೆ. ದ್ವಿಚಕ್ರ ವಾಹನಗಳಿಗೆ ಶುಲ್ಕವನ್ನು 300 ರೂ. ಬದಲು 1,000 ರೂ. ಎಂದು ನಿಗದಿಪಡಿಸಲಾಗಿದೆ. ಆಮದು ಮಾಡಿದ ಕಾರುಗಳಿಗೆ ವೆಚ್ಚವು 15,000 ರೂ. ಬದಲಿಗೆ 40,000 ರೂ. ಆಗಲಿದೆ. ಸರ್ಕಾರ ನಾಲ್ಕು ಚಕ್ರಗಳ ಬೆಲೆಗಳನ್ನು ಪ್ರಸ್ತುತ ಬೆಲೆಗಿಂತ ಎಂಟು ಪಟ್ಟು ಹೆಚ್ಚು ಹೆಚ್ಚಿಸುತ್ತಿದೆ.

ದೆಹಲಿಗೆ ಸಂಬಂಧಿಸಿದಂತೆ, ವಾಹನ ಮಾಲೀಕರಿಗೆ ತಮ್ಮ 10 ವರ್ಷಗಳ ಹಳೆಯ ಡೀಸೆಲ್/15 ವರ್ಷ ಹಳೆಯ ಪೆಟ್ರೋಲ್ ವಾಹನಗಳನ್ನು ಎಲೆಕ್ಟ್ರಿಕ್ ಗೆ ಪರಿವರ್ತಿಸಲು ಸರ್ಕಾರವು ಒಂದು ಆಯ್ಕೆಯನ್ನು ನೀಡಿದೆ.

Edited By : Nirmala Aralikatti
PublicNext

PublicNext

31/03/2022 02:03 pm

Cinque Terre

25.31 K

Cinque Terre

18

ಸಂಬಂಧಿತ ಸುದ್ದಿ