ನವದೆಹಲಿ: ಉಕ್ರೇನ್ ಮತ್ತು ರಷ್ಯಾ ದಾಳಿಯಿಂದ ಬಹುತೇಕ ದೇಶಗಳ ಆರ್ಥಿಕತೆ ಮೇಲೆ ಪರಿಣಾಮ ಬೀರಿದೆ. ಅದರಲ್ಲಿ ತೈಲ ಬೆಲೆ ಏರಿಕೆಯಿಂದ ಭಾರಿ ಎಫೆಕ್ಟ್ ಆಗಿದೆ. ಆದರೆ, ಭಾರತದ ಹಿಂದೂಸ್ತಾನ್ ಪೆಟ್ರೊಲಿಯಂ ಕಾರ್ಪೋರೇಷನ್ ಈಗ ರಷ್ಯಾದಿಂದ ಅಪರೂಪಕ್ಕೆ ಯರಲ್ಸ್ ಕಚ್ಚಾ ತೈಲವನ್ನ ಖರೀದಿಸಿದೆ.
ಹಿಂದೂಸ್ತಾನ್ ಪೆಟ್ರೋಲಿಯಂ ಸಂಸ್ಥೆ ಅಪರೂಪಕ್ಕೆ ಈಗ 2 ಮಿಲಿಯನ್ ಬ್ಯಾರಲ್ ಯರಲ್ಸ್ ಕಚ್ಚಾ ತೈಲವನ್ನ ರಷ್ಯಾದಿಂದಲೇ ಖರೀದಿಸಿದೆ.
ಇದು ಮೇ ತಿಂಗಳಲ್ಲಿ ರಷ್ಯಾದಿಂದ ಭಾರತಕ್ಕೆ ಆಗಮಿಸುತ್ತಿದೆ ಎಂದು ವ್ಯಾಪಾರಿ ಮೂಲಗಳು ತಿಳಿಸಿವೆ.
PublicNext
17/03/2022 05:55 pm