ನವದೆಹಲಿ : ದುಬಾರಿ ದುನಿಯಾದಲ್ಲಿ ಜೀವನ ನಡೆಸುವುದೇ ದುಸ್ತರವಾಗುತ್ತಿದೆ. ಸದ್ಯ ನೆಸ್ಲೆ ತನ್ನ ಕೆಲವು ಪ್ರಾಡಕ್ಟ್ ಗಳ ಬೆಲೆ ಏರಿಸಿ ಜನಸಾಮಾನ್ಯರಿಗೆ ಬೆಲೆ ಬಿಸಿ ತಟ್ಟುವಂತೆ ಮಾಡಿದೆ. ಹೌದು ಹಿಂದೂಸ್ತಾನ್ ಯೂನಿಲಿವರ್ (HUL) ಮತ್ತು ನೆಸ್ಲೆ ಕಂಪನಿ ಚಹಾ , ಕಾಫಿ, ಹಾಲು ಮತ್ತು ನೂಡಲ್ಸ್ ಗಳ ಬೆಲೆಯನ್ನು ಇಂದಿನಿಂದ ಹೆಚ್ಚಿಸಿದೆ.
ಎಚ್ ಯುಎಲ್ ಬ್ರೂ ಕಾಫಿಯ ಬೆಲೆಯನ್ನು 3-7% ಮತ್ತು ಬ್ರೂ ಗೋಲ್ಡ್ ಕಾಫಿ ಜಾರ್ ನ ಬೆಲೆ 3-4% ಹೆಚ್ಚಿಸಿದೆ. ಇನ್ ಸ್ಟಂಟ್ ಕಾಫಿ ಪೌಚ್ ಗಳ ಬೆಲೆಯೂ ಶೇ.3ರಿಂದ ಶೇ.6.66ಕ್ಕೆ ಏರಿಕೆಯಾಗಿದೆ.
ಇದಲ್ಲದೇ ತಾಜ್ ಮಹಲ್ (Taj Mahal) ಟೀ ಬೆಲೆ ಶೇ.3.7ರಿಂದ ಶೇ.5.8ಕ್ಕೆ ಏರಿಕೆಯಾಗಿದೆ. ಬ್ರೂಕ್ ಬಾಂಡ್ ನ (Brooke Bond) ಎಲ್ಲಾ ವಿಧದ ಚಹಾಗಳ ಬೆಲೆಗಳು 1.5% ರಿಂದ 14% ಕ್ಕೆ ಏರಿದೆ.
ಮ್ಯಾಗಿ ದರದಲ್ಲಿ ಶೇ.9 ರಿಂದ 16 ರಷ್ಟು ಏರಿಕೆ :
ನೆಸ್ಲೆ ಇಂಡಿಯಾ ಕೂಡ ಮ್ಯಾಗಿ (Maggi) ಬೆಲೆಯನ್ನು 9 ರಿಂದ 16% ರಷ್ಟು ಹೆಚ್ಚಿಸಿದೆ.
70 ಗ್ರಾಂ ಮ್ಯಾಗಿ ಪ್ಯಾಕ್ ಗೆ 12 ರೂ. ರಿಂದ 14 ರೂ.,40 ಗ್ರಾಂ ಮ್ಯಾಗಿ ಮಸಾಲಾ ನೂಡಲ್ಸ್ ಗೆ 3 ರೂ. ಹೆಚ್ಚಿಸಲಾಗಿದೆ. 560 ಗ್ರಾಂ ಮ್ಯಾಗಿ ಪ್ಯಾಕ್ ಗೆ 96 ರೂ. ಬದಲಿಗೆ 105 ರೂ. ಪಾವತಿಸಬೇಕಾಗಿದೆ.
ನೆಸ್ಲೆ ಒಂದು ಲೀಟರ್ ಎ+ ಹಾಲಿನ ಬೆಲೆ 75 ರಿಂದ 78 ರೂ. ನೆಸ್ಕೆಫೆ ಕ್ಲಾಸಿಕ್ ಕಾಫಿ ಪೌಡರ್ ಬೆಲೆ ಶೇ.3-7ರಷ್ಟು ಹೆಚ್ಚಾಗಿದೆ. ನೆಸ್ಕೆಫೆಯ 25 ಗ್ರಾಂ ಪ್ಯಾಕ್ ಈಗ 2.5% ರಷ್ಟು ದುಬಾರಿಯಾಗಿದೆ. 50 ಗ್ರಾಂ ನೆಸ್ಕೆಫೆ ಕ್ಲಾಸಿಕ್ ಗೆ 145 ರೂ.ಬದಲಿಗೆ 150 ರೂ.ಪಾವತಿಸಬೇಕಾಗುತ್ತದೆ.
PublicNext
14/03/2022 06:13 pm