ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಕ್ರೇನ್‌ ನಿಂದ ಭಾರತಕ್ಕೆ ಬರ್ತಿದ್ದ ಸೂರ್ಯಕಾಂತಿ ಎಣ್ಣೆ ಆಮದು ಸ್ಥಗಿತ !

ನವದೆಹಲಿ: ಉಕ್ರೇನ್ ಮತ್ತು ರಷ್ಯಾ ಯುದ್ಧದ ಎಫೆಕ್ಟ್ ಎಲ್ಲ ದೇಶದ ಮೇಲೂ ಪರಿಣಾಮ ಬೀರುತ್ತಿದೆ. ಷೇರುಮಾರುಕಟ್ಟೆ ದಿನವೂ ವ್ಯತ್ಯಾಸ ಕಾಣುತ್ತಿದೆ. ಅದರಂತೆ ಈಗ ಉಕ್ರೇನ್ ನಿಂದ ಭಾರತಕ್ಕೆ ಆಮದು ಆಗುತ್ತಿದ್ದ ಸೂರ್ಯಕಾಂತಿ ಎಣ್ಣೆ ಆಮದು ಮೇಲೂ ಪರಿಣಾಮ ಬೀರಿದೆ.

ಉಕ್ರೇನ್ ದೇಶ ಘನಗೋರ ಯುದ್ಧದ ಸನ್ನಿವೇಶವನ್ನೇ ಎದುರಿಸುತ್ತಿದೆ. ಇದರಿಂದ ಇಲ್ಲಿಂದ ಸೂರ್ಯಕಾಂತಿ ತೈಲ ಆಮದು ಅಸಾಧ್ಯವೇ ಸರಿ. ಹಾಗಾಗಿ ಸೂರ್ಯಕಾಂತಿ ತೈಲದ ಆಮದು ಸದ್ಯ ಸ್ಥಗಿತಗೊಂಡಿದೆ. ಯುದ್ಧ ಹೀಗೆ ಮುಂದುವರೆದರೆ ಸೂರ್ಯಕಾಂತಿ ಎಣ್ಣೆ ಅಭಾವ ಭಾರತದಲ್ಲಿ ಅತಿ ಹೆಚ್ಚಾಗಬಹುದು.

ಆದರೆ ಸದ್ಯದ ಪರಿಸ್ಥಿತಿಯಲ್ಲಿ ಸೂರ್ಯಕಾಂತಿ ಎಣ್ಣೆ ಸ್ಟಾಕ್ ಇದೆ. ಹೆಚ್ಚು ಕಡಿಮೆ 45 ರಿಂದ 60 ದಿನಗಳವರೆಗೂ ಆಗುವಷ್ಟು ಸೂರ್ಯಕಾಂತಿ ಎಣ್ಣೆ ಆಮದಾಗಿದೆ ಎಂದು ಅತಿ ದೊಡ್ಡ ಉತ್ಪಾದಕ ಸಂಸ್ಥೆಯ ಅದಾನಿ ವಿಲ್ಮರ್‌ನ ಅಂಗ್ಯು ಮಲ್ಲಿಕ್ ಈ ಬಗ್ಗೆ ಹೇಳಿಕೊಂಡಿದ್ದಾರೆ.

Edited By :
PublicNext

PublicNext

04/03/2022 04:24 pm

Cinque Terre

37.54 K

Cinque Terre

2

ಸಂಬಂಧಿತ ಸುದ್ದಿ