ಭಾರತ್‌ಪೇ ಕಂಪನಿಯ ಸಂಸ್ಥಾಪಕ ಅಶ್ನೀರ್ ಗ್ರೋವರ್ ಕುಟುಂಬದ ವಿರುದ್ಧ ಕಂಪನಿಯ ಮಂಡಳಿಯು ಮೊಟ್ಟ ಮೊದಲ ಬಾರಿಗೆ ಗುರುತರ ಆರೋಪ ಮಾಡಿದೆ. ಇಡೀ ಗ್ರೋವರ್ ಕುಟುಂಬ ವಿಲಾಸಿ ಜೀವನಕ್ಕೆ ಕಂಪನಿಯ ದುಡ್ಡನ್ನ ದುರುಪಯೋಗ ಪಡಿಸಿಕೊಂಡಿದೆ ಅಂತಲೇ ಮಂಡಳಿ ದೂರಿದೆ.
ಹೌದು ಭಾರತ್‌ಪೇ ಕಂಪನಿ ಮತ್ತು ಗ್ರೋವರ್ ಫ್ಯಾಮಿಲಿ ನಡುವೆ ಗುದ್ದಾಟ ನಡೀತಿದೆ. ಕಂಪನಿಯ ಕಂಟ್ರೋಲ್ಸ್ ಹೆಡ್ ಆಗಿದ್ದ ಮಾಧುರಿ ಜೈನ್ ಗ್ರೋವರ್ ಗೋಲ್‌ಮಾಲ್ ಕಾರಣಕ್ಕೇನೆ ವಜಾಗೊಂಡಿದ್ದರು.
ಆಗಲೂ ಏನೂ ಹೇಳದೆ ಇದ್ದ ಕಂಪನಿಯ ಮಂಡಳಿ ಈಗ ಒಂದೊಂದೇ ಆರೋಪ ಮಾಡುತ್ತಿದೆ. ತಮ್ಮ ವಿಲಾಸಿ ಜೀವನಕ್ಕಾಗಿಯೇ ಕಂಪನಿಯ ಹಣವನ್ನೆಲ್ಲ ಉಪಯೋಗಿಸಿದ್ದಾರೆ ಎಂದೇ ಮಂಡಳಿ ದೂರಿದೆ. ಇದಕ್ಕಾಗಿ ಈಗ ಕಾನೂನು ಹೋರಾಟಕ್ಕೂ ಸಜ್ಜಾಗಿದೆ ಅಂತಲೇ ಮಂಡಳಿ ತಿಳಿಸಿದೆ.
PublicNext
02/03/2022 07:15 pm