ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತಿಂಗಳಲ್ಲಿ 1.33 ಲಕ್ಷ ಕೋಟಿ GST ಸಂಗ್ರಹ : ಆರ್ಥಿಕ ಅಭಿವೃದ್ಧಿಯಲ್ಲಿ ಹಿನ್ನಡೆ ಇಲ್ಲ

ಹೊಸದಿಲ್ಲಿ: ಕಳೆದ ತಿಂಗಳು ಅಂದ್ರೆ 2022 ಫೆಬ್ರವರಿಯಲ್ಲಿ ದೇಶದಲ್ಲಿ 1.33 ಲಕ್ಷ ಕೋಟಿ ರೂ. ಜಿಎಸ್ ಟಿ ಸಂಗ್ರಹವಾಗಿದೆ. 2021 ರ ಫೆಬ್ರವರಿಗಿಂತ ಶೇ.18 ರಷ್ಟು ಹೆಚ್ಚು ತೆರಿಗೆ ಸಂಗ್ರಹವಾಗಿರುವುದು ಆರ್ಥಿಕ ಅಭಿವೃದ್ಧಿಯಲ್ಲಿ ಹಿನ್ನಡೆ ಇಲ್ಲ ಎನ್ನುವುದನ್ನು ತಿಳಿಸುತ್ತಿದೆ.

ಇದೇ ಮೊದಲ ಬಾರಿಗೆ ಸೆಸ್ ಸಂಗ್ರಹ 10,000 ಕೋಟಿ ರೂ.ಗೂ ಅಧಿಕವಾಗಿದೆ. ಸರಕು ಮತ್ತು ಸೇವಾ ತೆರಿಗೆ (ಜಿಎಸ್ ಟಿ) ಸಂಗ್ರಹ ಏರಿಕೆಗೆ ಆಟೋಮೊಬೈಲ್ ಮತ್ತು ಕೆಲ ವಲಯಗಳಲ್ಲಿ ವ್ಯಾಪಾರ ಚಟುವಟಿಕೆಗಳ ಚೇತರಿಕೆ ಪ್ರಭಾವ ಬೀರಿತು ಎಂದು ಹಣಕಾಸು ಸಚಿವಾಲಯ ತಿಳಿಸಿದೆ.

ಫೆಬ್ರವರಿಯಲ್ಲಿ ಸಂಗ್ರಹವಾಗಿರುವ 1,33,026 ಕೋಟಿ ರೂ. ಜಿಎಸ್ ಟಿಯಲ್ಲಿ ಸೆಂಟ್ರಲ್ ಜಿಎಸ್ ಟಿ 24,435 ಕೋಟಿ ರೂ, ರಾಜ್ಯ ಜಿಎಸ್ಟಿ 30,779 ಕೋಟಿ ರೂ, ಸಂಯೋಜಿತ ಜಿಎಸ್ಟಿ 67,471 ಕೋಟಿ ರೂ. ಮತ್ತು ಸೆಸ್ 10,340 ಕೋಟಿ ರೂ.ಗಳಾಗಿವೆ. ಫೆಬ್ರವರಿಯಲ್ಲಿ ರಾಜ್ಯಗಳ ಗರಿಷ್ಠ ಜಿಎಸ್ ಟಿ ಸಂಗ್ರಹದಲ್ಲಿ ಕರ್ನಾಟಕವು ದೇಶದಲ್ಲೇ ಎರಡನೇ ಸ್ಥಾನ ಪಡೆದಿದೆ.

ಕರ್ನಾಟಕದಲ್ಲಿ 9,176 ಕೋಟಿ ರೂ. ಜಿಎಸ್ ಟಿ ಸಂಗ್ರಹವಾಗಿದೆ.

Edited By : Nirmala Aralikatti
PublicNext

PublicNext

02/03/2022 11:48 am

Cinque Terre

20.34 K

Cinque Terre

0