ನವದೆಹಲಿ: ಟರ್ಕಿಶ್ ಏರ್‌ಲೈನ್ಸ್‌ನ ಮಾಜಿ ಅಧ್ಯಕ್ಷ ಇಲ್ಕರ್ ಐಸಿ ಅವರು ಏರ್ ಇಂಡಿಯಾದ ಹೊಸ ಸಿಇಒ ಆಗುವ ಟಾಟಾ ಸನ್ಸ್‌ನ ಪ್ರಸ್ತಾಪವನ್ನು ತಿರಸ್ಕರಿಸಿದ್ದಾರೆ.
ಸರ್ಕಾರದಿಂದ ಏರ್ ಇಂಡಿಯಾವನ್ನು ಸ್ವಾಧೀನಪಡಿಸಿಕೊಂಡ ಟಾಟಾ ಗ್ರೂಪ್, ನಷ್ಟದಲ್ಲಿರುವ ವಿಮಾನಯಾನ ಸಂಸ್ಥೆಯ ನೂತನ ಸಿಇಒ ಮತ್ತು ಎಂಡಿ ಆಗಿ ಇಲ್ಕರ್ ಐಸಿ ಅವರನ್ನು ನೇಮಕ ಮಾಡಿರುವುದಾಗಿ ಇತ್ತೀಚೆಗೆ ಪ್ರಕಟಿಸಿತ್ತು. ಆದರೆ, 'ಈ ಸ್ಥಾನಕ್ಕೆ ತನ್ನ ನೇಮಕಾತಿಯನ್ನು ಭಾರತೀಯ ಮಾಧ್ಯಮವು ಬಣ್ಣ ಹಚ್ಚಿದೆ' ಎಂದು ಐಸಿ ಆರೋಪಿಸಿದ್ದಾರೆ ಎಂದು ಬ್ಲೂಮ್‌ಬರ್ಗ್ ವರದಿ ಮಾಡಿದೆ. ಇದಕ್ಕೂ ಮೊದಲು, ಆರ್‌ಎಸ್‌ಎಸ್-ಅಂಗಸಂಸ್ಥೆ ಸ್ವದೇಶಿ ಜಾಗರಣ್ ಮಂಚ್ 1990ರಲ್ಲಿ ಟರ್ಕಿಯ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೋಗನ್ ಅವರ ಸಲಹೆಗಾರರಾಗಿದ್ದ ಐಸಿಯ ನೇಮಕವನ್ನು "ರಾಷ್ಟ್ರೀಯ ಭದ್ರತೆ" ಉಲ್ಲೇಖಿಸಿ ವಿರೋಧಿಸಿತ್ತು.
PublicNext
01/03/2022 01:38 pm