ನವದೆಹಲಿ: ಗ್ರಾಹಕರ ಜೇಬಿಗೆ ಕತ್ತರಿ ಹಾಕಿರುವ ಗುಜರಾತ್ ಸಹಕಾರಿ ಹಾಲು ಮಾರಾಟ ಒಕ್ಕೂಟ ಮಾರ್ಚ್ 1ರಿಂದ ಜಾರಿಗೆ ಬರುವಂತೆ ಅಮೂಲ್ ಹಾಲಿನ ಬೆಲೆಯಲ್ಲಿ ಏರಿಕೆ ಮಾಡಿದ್ದು, ಪ್ರತಿ ಲೀಟರ್ಗೆ 2 ರೂ. ಹೆಚ್ಚಳ ಮಾಡಿದೆ.
ಬೆಲೆ ಏರಿಕೆ ಹಿನ್ನೆಲೆಯಲ್ಲಿ ಅಮೂಲ್‌ನ 500 ಮಿ.ಲೀ ಗೋಲ್ಡ್ ಹಾಲಿನ ಬೆಲೆ 30 ರೂ., ಇನ್ನು ಅಮೂಲ್ ತಾಜಾ 24 ರೂ.ಗೆ ಅರ್ಧ ಲೀಟರ್ ಮತ್ತು ಅಮೂಲ್ ಶಕ್ತಿ 27 ರೂ. ಆಗಲಿದೆ. ಅಮೂಲ್ ಪ್ರಕಾರ, ಉತ್ಪಾದನಾ ವೆಚ್ಚದ ಹೆಚ್ಚಳದಿಂದಾಗಿ ಬೆಲೆಗಳನ್ನು ಹೆಚ್ಚಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ.
ದೆಹಲಿ, ತೆಲಂಗಾಣ, ಆಂಧ್ರಪ್ರದೇಶ, ಮಹಾರಾಷ್ಟ್ರ, ಕೋಲ್ಕತ್ತಾ, ಗುಜರಾತ್ ಸೇರಿದಂತೆ ದೇಶದ ಎಲ್ಲ ನಗರಗಳಲ್ಲೂ ಈ ಹಾಲು ಮಾರಾಟವಾಗುತ್ತಿದ್ದು, ಇದೀಗ ಗ್ರಾಹಕರು ಎರಡು ರೂ. ಹೆಚ್ಚುವರಿ ನೀಡಬೇಕಾಗಿದೆ.
PublicNext
28/02/2022 10:13 pm