ಉಕ್ರೇನ್ ಮೇಲೆ ರಷ್ಯಾ ದಾಳಿ ನಡೆಸಿದ ಮೇಲೆ ಅದರ ಎಫೆಕ್ಟ್ ಮಧ್ಯಪ್ರಿಯರ ಮೇಲೂ ಆಗಿದೆ. ಬಿಯರ್ ತಯಾರಿಕೆಗೆ ಬಳಸುವ ಬಾರ್ಲಿಯ ಬೆಲೆ ಮತ್ತು ಪೂರೈಕೆ ಮೇಲೆ ಪರಿಣಾಮ ಬೀರಲಿದೆ. ಇದರಿಂದ ಬಿಯರ್ ದರ ಹೆಚ್ಚಾಗೋ ಸಾಧ್ಯತೆ ಜಾಸ್ತಿನೇ ಇದೆ.
ಭಾರತ ಕೂಡ ಬಿಯರ್‌ಗೆ ಬಳಸೋ ಬಾರ್ಲಿಯನ್ನ ಉತ್ಪಾದಿಸುತ್ತವೆ. ದೇಶಿಯ ಬಿಯರ್ ತಯಾರಕರೂ ದೇಶಿಯ ಬಾರ್ಲಿಯನ್ನೇ ಅವಲಂಬಿಸಿದ್ದಾರೆ. ಆದರೆ ಬಾರ್ಲಿಯ ಜಾಗತಿಕ ಬೆಲೆ ಏರಿಕೆಯಿಂದ ದೇಶಿಯ ಬಾರ್ಲಿ ಮೇಲೂ ಏಟು ಬೀಳಲಿದೆ. ಇದರಿಂದ ಬಿಯರ್ ದರ ಗಗನಕ್ಕೇರೋ ಚಾನ್ಸ್ ಜಾಸ್ತಿನೇ ಇದೆ.
PublicNext
28/02/2022 05:40 pm