ಮುಂಬೈ: ರಷ್ಯಾ ಮತ್ತು ಉಕ್ರೇನ್ ಸಂರ್ಘರ್ಷ ತೀವ್ರಗೊಂಡಿದೆ. ಇದರಿಂದ ಷೇರು ಮಾರುಕಟ್ಟೆಯಲ್ಲಿ ತಲ್ಲಣ ಉಂಟಾಗಿದೆ. ಷೇರುಗಳ ಕುಸಿತ ಕಂಡಿವೆ.
ದಿನದ ಆರಂಭದಲ್ಲಿ ಸೆನ್ಸೆಕ್ಸ್ 1,300 ಅಂಶದಷ್ಟು ಇಳಿಕೆ ಕಂಡಿತ್ತು.ದಿನದ ಕೊನೆಯಲ್ಲಿ 382 ಅಂಶ ಇಳಿಕೆ ಕಂಡು ವಹಿವಾಟು ಅಂತ್ಯಗೊಂಡಿದೆ.
ರಾಷ್ಟ್ರೀಯ ಷೇರುಪೇಟೆ ಸಂವೇದಿ ಸೂಚ್ಯಂಕ ನಿಫ್ಟಿ 114 ಅಂಶ ಇಳಿಕೆ ದಾಖಲಿಸಿತ್ತು. ಆರ್ಥಿಕ ಬಿಕ್ಕಟ್ಟು ಈಗಲೇ ಎದ್ದು ಕಾಣುತ್ತಿವೆ. ಕಚ್ಚಾ ತೈಲ ಹಾಗೂ ಚಿನ್ನದ ಬೆಲೆ ಹೆಚ್ಚಾಗಿದೆ ಎಂದು ಜಿಯೋಜಿತ್ ಫೈನಾನ್ಶಿಯಲ್ ಸರ್ವಿಸ್‌ನ ಮುಖ್ಯಸ್ಥ ಹೂಡಿಕೆ ತಜ್ಞ ವಿ.ಕೆ.ವಿಜಯಕುಮಾರ್ ಹೇಳಿದ್ದಾರೆ.
PublicNext
23/02/2022 10:08 am