ಮುಂಬೈ: ರಷ್ಯಾ ಮತ್ತು ಉಕ್ರೇನ್ ಗಡಿಯಲ್ಲಿ ಸೇನಾ ಜಮಾವಣೆ ಹೆಚ್ಚುತ್ತಿದ್ದಂತೆ ಯುದ್ಧದ ಕಾರ್ಮೋಡವೂ ಮತ್ತಷ್ಟು ಆವರಿಸಿಕೊಂಡಿದೆ. ಈ ಮಧ್ಯೆ ಉಕ್ರೇನ್‌ನ ಐವರು ಸೈನಿಕರನ್ನು ಹತ್ಯೆಗೈದಿರುವುದಾಗಿ ರಷ್ಯಾ ಹೇಳಿಕೊಂಡಿದೆ. ಈ ಯುದ್ಧ ಭೀತಿಯ ಪರಿಣಾಮ ಭಾರತದ ಷೇರುಪೇಟೆ ಹೂಡಿಕೆದಾರರ ಮೇಲೆ ಬೀರಿದೆ.
ಹೌದು. ಮಂಗಳವಾರ (ಫೆ.22ರಂದು) ಮುಂಬೈ ಷೇರುಪೇಟೆ ಸೆನ್ಸೆಕ್ಸ್ ಆರಂಭಿಕ ವಹಿವಾಟಿನಲ್ಲಿಯೇ 1,000ಕ್ಕೂ ಅಧಿಕ ಅಂಕ ಕುಸಿತ ಕಂಡಿದೆ. ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ 1,004 ಅಂಕಗಳಷ್ಟು ಭಾರೀ ಇಳಿಕೆಯಾಗಿದ್ದು, 56,680 ಅಂಕಗಳಲ್ಲಿ ವಹಿವಾಟು ಮುಂದುವರಿದಿದೆ. ಅದೇ ರೀತಿ ದೆಹಲಿಯಲ್ಲಿರುವ ಭಾರತೀಯ ರಾಷ್ಟ್ರೀಯ ಷೇರು ವಿನಿಮಯ ಕೇಂದ್ರ (ಎನ್‌ಎಸ್‌ಇ) ನಿಫ್ಟಿ ಕೂಡ 285 ಅಂಕಗಳಷ್ಟು ಕುಸಿತವಾಗಿದ್ದು, 16,922 ಅಂಕಗಳಿಗೆ ಇಳಿಕೆಯಾಗಿದೆ.
ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್) ಷೇರು ಮೌಲ್ಯ ಭಾರೀ ಕುಸಿತ ಕಂಡಿದೆ. ಇನ್ನು ಡಾ.ರೆಡ್ಡೀಸ್, ಎಲ್ ಆ್ಯಂಡ್ ಟಿ, ಟಿಸಿಎಸ್, ಟೆಕ್ ಮಹೀಂದ್ರ, ಎಚ್‌ಡಿಎಫ್‌ಸಿ ಮತ್ತು ಬಜಾಜ್ ಫಿನ್ ಸರ್ವ್ ಷೇರುಗಳ ಮೌಲ್ಯ ಶೇ.3.06ರಷ್ಟು ಕುಸಿತ ಕಂಡಿದೆ. ಸೋಮವಾರ ಮುಂಬೈ ಷೇರುಪೇಟೆಯ ಸೆನ್ಸೆಕ್ಸ್ 149 ಅಂಕಗಳ ಇಳಿಕೆಯೊಂದಿಗೆ 57,684 ಅಂಕಗಳೊಂದಿಗೆ ದಿನಾಂತ್ಯದ ವಹಿವಾಟು ಮುಕ್ತಾಯಗೊಂಡಿತ್ತು. ಎನ್‌ಎಸ್‌ಇ ನಿಫ್ಟಿ 70 ಅಂಕ ಕುಸಿದಿದ್ದು, 17,207 ಅಂಕಗಳಲ್ಲಿ ದಿನಾಂತ್ಯದ ವಹಿವಾಟು ಕೊನೆಗೊಂಡಿತ್ತು.
PublicNext
22/02/2022 11:06 am