Better.Com ಸಿಇಓ ವಿಶಾಲ್ ಗಾರ್ಗ್ ತಮ್ಮ ಕಂಪನಿಯ 900 ಉದ್ಯೋಗಿಗಳನ್ನ ವೆಬಿನಾರ್ ಮೂಲಕವೇ ವಜಾಗೊಳಿಸಿ ಉದ್ಯೋಗಿಗಳಿಗೆ ಸಡನ್ ಶಾಕ್ ನೀಡಿದ್ದಾರೆ.
ಜೂಮ್ ವೀಡಿಯೋ ಕಾಲ್ ಮೂಲಕ ವಿಶಾಲ್ ಗಾರ್ಗ್ ವೆಬಿನಾರ್ ನಡೆಸಿದ್ದರು. ಆಗಲೇ ಕಂಪನಿಯ 900 ಉದ್ಯೋಗಿಗಳನ್ನ ವಜಾ ಮಾಡೋದಾಗಿಯೂ ಹೇಳಿದ್ದಾರೆ. ಇದನ್ನ ಕೇಳಿದ ಉದ್ಯೋಗಿಗಳು ಶಾಕ್ ತೆಗೆದುಕೊಳ್ಳದೇ ಇನ್ನೇನೂ ಮಾಡಿಯಾರು ?
ಆದರೆ ಕಂಪನಿಯ ಉದ್ಯೋಗಿಗಳನ್ನ ಟರ್ಮಿನೇಟ್ ಮಾಡಿರೋ ವಿಶಾಲ್ ಗಾರ್ಗ್,ಉದ್ಯೋಗಿಗಳನ್ನ ತೆಗೆದು ಹಾಕುವ ಕೆಲಸವನ್ನ ನಾನು ಎರಡನೇ ಭಾರಿ ಮಾಡಿದ್ದೇನೆ. ಕಳೆದ ಸಲ ಇದೇ ರೀತಿ ಮಾಡಿದಾಗ ನನ್ನ ಕಣ್ಣಲ್ಲೂ ನೀರಿತ್ತು ಅಂತಲೇ ಭಾವುಕ ಮಾತುಗಳನ್ನೂ ಆಡಿದ್ದಾರೆ.
PublicNext
06/12/2021 04:41 pm