ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಇನ್ಮೇಲೆ ಎಟಿಎಂನಲ್ಲೂ ಇಡ್ಲಿಸಿಗ್ತವೆ: ಹೇಗೆ ಅಂತಿರೋ ಈ ಸ್ಟೋರಿ ನೋಡಿ

ಬೆಂಗಳೂರು: ಇಡ್ಲಿ ಯಾರಿಗೆ ಇಷ್ಟ ಆಗೋದಿಲ್ಲ ಹೇಳಿ. ಎಂತಹ ವ್ಯಕ್ತಿ ಇದ್ದರೂ ಸರಿಯೇ. ಎರಡು ಇಡ್ಲಿ ತಿಂದು ಹಸಿವು ನೀಗಿಕೊಳ್ಳುತ್ತಾನೆ. ಇಂತಹ ಇಡ್ಲಿಗಳು ನಮಗೆ ಯಾವಾಗ ಬೇಕೋ ಆವಾಗ, ಎಟಿಎಂ ನಲ್ಲಿ ದುಡ್ಡು ಡ್ರಾ ಮಾಡುವ ಹಾಗೆ ಸಿಗುವ ಹಾಗಿದ್ದರೆ ಹೇಗೆ ? ಕೇಳಲಿಕ್ಕೇನೆ ಚೆನ್ನಾಗಿದೆ ಅಲ್ವೇ. ಈ ಒಂದು ಪ್ರಯೋಗ ಇನ್ನೇನು ಬೆಂಗಳೂರಲ್ಲಿ ಆಗಲಿದೆ. ಬನ್ನಿ, ಇತರ ಮಾಹಿತಿಯನ್ನ ನಾವ್ ನಿಮ್ಗೆ ಕೊಡ್ತೀವಿ.

ಇಡ್ಲಿ ಎಟಿಎಂ ಶೀಘ್ರದಲ್ಲಿಯೇ ಆರಂಭಗೊಳ್ಳಲಿವೆ. ಅದಕ್ಕೆ ಬೇಕಾದ ಸೂಕ್ತ ತಯಾರಿನೂ ನಡೀತಿದೆ.ನಿಮಗೆ ಯಾವಾಗ ಬೇಕೋ ಆವಾಗ ಇಡ್ಲಿ ಎಟಿಎಂ ನಲ್ಲಿ ಇಡ್ಲಿ ದೊರೆಯುತ್ತದೆ.

ಜನ ಓಡಾಡೋ ಸ್ಥಳದಲ್ಲಿಯೇ ಈ ಎಟಿಎಂ ಪ್ಲಾನ್ ಮಾಡಲಾಗುತ್ತಿದೆ. ಇಡ್ಲಿ ಬೋಟ್ ಹೆಸರಿನ ಎರಡು ಯಂತ್ರಗಳು ಬಿಸಿಬಿಸಿ ಇಡ್ಲಿ ಮತ್ತು ಚಟ್ನಿ,ಸಾಂಬಾರ್‌ನ್ನ ದಿನದ 24 ಗಂಟೆನೂ ಪೂರೈಸಲಿವೆ.

ಹಾಗಂತ ನಾವ್ ಇದನ್ನ ಹೇಳ್ತಿಲ್ಲ.ಫ್ರಶ್ ಹಾಟ್ ರೋಬೋಟಿಕ್ಸ್ ಪ್ರೈ.ಲಿಮಿಟೆಡ್‌ನ ಸಿಇಓ ಶರಣ್ ಹಿರೇಮಠ ಹೇಳಿದ್ದಾರೆ.ಮಗಳಿಗೆ ಆರೋಗ್ಯ ಸರಿ ಇಲ್ಲದೇ ಇದ್ದಾಗ ಇಡ್ಲಿ ಬೇಕಾಗಿದೆ. ಆದರೆ ಆ ಕ್ಷಣಕ್ಕೆ ಇವರಿಗೆ ಎಲ್ಲೂ ಇಡ್ಲಿನೇ ಸಿಕ್ಕಿಲ್ಲ.ಅದಕ್ಕಾಗಿಯೇ ಇಡ್ಲಿ ಎಟಿಎಂ ಪರಿಯಕಲ್ಪನೆ ಮೇಲೆ ವರ್ಕೌ ಮಾಡಿದ್ದಾರೆ. ಇನ್ನೇನು ಶೀಘ್ರದಲ್ಲಿ ಬೆಂಗಳೂರಿನ ಜನನಿಬಿಡ ಪ್ರದೇಶದಲ್ಲಿ ಇಡ್ಲಿ ಎಟಿಎಂ ನಿಮಗೆ ಸೇವೆ ಒದಗಿಸಲಿವೆ.

Edited By :
PublicNext

PublicNext

28/11/2021 08:36 pm

Cinque Terre

64.15 K

Cinque Terre

2

ಸಂಬಂಧಿತ ಸುದ್ದಿ