ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

Crypto Bill ತರಲು ಮೋದಿ ಸರ್ಕಾರ ರೆಡಿ, Bitcoin ಸೇರಿದಂತೆ ಅನೇಕ ಕ್ರಿಪ್ಟೊಕರೆನ್ಸಿಗಳ ಮೌಲ್ಯ ಕುಸಿತ

ಬಿಟ್‌ಕಾಯಿನ್(Bitcoin) ಬೆಲೆ ನವೆಂಬರ್ 24 (ಇಂದು) ಕನಿಷ್ಠ ಮಟ್ಟಕ್ಕೆ ಇಳಿದಿದ್ದು ಹೆಚ್ಚು ಜನಪ್ರಿಯ ಕ್ರಿಪ್ಟೋ ಕರೆನ್ಸಿ (Crypto Currency)ಮೌಲ್ಯವು 55,460.96 ಡಾಲರ್‌ಗೆ ಕುಸಿದಿದೆ. ಈ ಕುಸಿತಕ್ಕೆ ಹಲವಾರು ಅಂಶಗಳು ಕಾರಣವಾಗಿರಬಹುದು ಎಂಬುದಾಗಿ ವಿಶ್ಲೇಷಕರು ನಂಬಿದ್ದಾರೆ. ವರ್ಷದ ಅಂತ್ಯದ ಲಾಭ ಗಳಿಕೆ, ಹೆಚ್ಚುತ್ತಿರುವ ಮಾರಾಟದ ಒತ್ತಡ ಹಾಗೂ 'ಕ್ರಿಪ್ಟೋಕರೆನ್ಸಿ ಮತ್ತು ಅಧಿಕೃತ ಡಿಜಿಟಲ್ ಕರೆನ್ಸಿಯ ನಿಯಂತ್ರಣ' ಮಸೂದೆ (Crypto Bill) ಪರಿಚಯಿಸುವ ಭಾರತೀಯ ಸರಕಾರದ ನಿರ್ಧಾರವು ಶೀಘ್ರದಲ್ಲೇ ಕ್ರಿಪ್ಟೋ ಕರೆನ್ಸಿ ಜಗತ್ತನ್ನು ಒತ್ತಡದಲ್ಲಿ ಇರಿಸಲಿದೆ.

ಕ್ರಿಪ್ಟೋ ಕರೆನ್ಸಿಗಳನ್ನು ನಿಷೇಧಿಸುವ ಮಸೂದೆ:

ನವೆಂಬರ್ 24ರಂದು CoinMarketCap ಉಲ್ಲೇಖಿಸಿರುವಂತೆ, ವಿಶ್ವದ ಅತಿದೊಡ್ಡ ಕ್ರಿಪ್ಟೋ ಕರೆನ್ಸಿ ಮಾರುಕಟ್ಟೆ ಬಂಡವಾಳದ ಮೂಲಕ 0.58% ಕುಸಿತ ದಾಖಲಿಸಿ 56,607.05 ಡಾಲರ್‌ಗೆ ಇಳಿದಿದೆ. ಬ್ಲಾಕ್‌ಚೈನ್ ತಂತ್ರಜ್ಞಾನ (ಬಿಟ್‌ಕಾಯಿನ್ ಅಥವಾ ಇನ್ನೊಂದು ಕ್ರಿಪ್ಟೋಕರೆನ್ಸಿಯಲ್ಲಿ ಮಾಡಿದ ವಹಿವಾಟಿನ ದಾಖಲೆಯನ್ನು ಹಲವಾರು ಕಂಪ್ಯೂಟರ್‌ಗಳಲ್ಲಿ ನಿರ್ವಹಿಸುವ ವ್ಯವಸ್ಥೆ) ಉತ್ತೇಜಿಸುವ ಕೆಲವು ನಿರೀಕ್ಷೆಗಳೊಂದಿಗೆ ಭಾರತದಲ್ಲಿ ಎಲ್ಲಾ ಖಾಸಗಿ ಕ್ರಿಪ್ಟೋಕರೆನ್ಸಿಗಳನ್ನು ನಿಷೇಧಿಸುವ ಮಸೂದೆಯನ್ನು ಮುಂಬರುವ ಚಳಿಗಾಲದ ಅಧಿವೇಶನದಲ್ಲಿ ಪರಿಚಯಿಸಲಾಗುವುದು.

ಈ ಮಸೂದೆಯು ಭಾರತದಲ್ಲಿರುವ ಎಲ್ಲಾ ಕ್ರಿಪ್ಟೋ ಕರೆನ್ಸಿಗಳನ್ನು ನಿಷೇಧಿಸುವ ಗುರಿ ಹೊಂದಿದ್ದು, ಕ್ರಿಪ್ಟೋ ಕರೆನ್ಸಿಯ ಆಧಾರವಾಗಿರುವ ತಂತ್ರಜ್ಞಾನ ಹಾಗೂ ಅದರ ಉಪಯೋಗಗಳನ್ನು ಉತ್ತೇಜಿಸಲು ಕೆಲವು ವಿನಾಯಿತಿಗಳನ್ನು ಇದು ನೀಡಲಿದೆ ಎಂಬುದಾಗಿ ಲೋಕಸಭೆಯ ವೆಬ್‌ಸೈಟ್‌ನಲ್ಲಿ ಪೋಸ್ಟ್ ಮಾಡಲಾದ ಬುಲೆಟಿನ್ ತಿಳಿಸಿದೆ.

ಡಿಜಿಟಲ್ ಕರೆನ್ಸಿ ಬಿಡುಗಡೆ..!

ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಕೂಡ ತನ್ನದೇ ಆದ ಡಿಜಿಟಲ್ ಕರೆನ್ಸಿ ಬಿಡುಗಡೆ ಮಾಡುವ ಯೋಜನೆ ರೂಪಿಸಿಕೊಂಡಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಇಶ್ಯೂ ಮಾಡುವ ಅಧಿಕೃತ ಡಿಜಿಟಲ್ ಕರೆನ್ಸಿಯ ರಚನೆಗೆ ಅನುಕೂಲಕರ ಚೌಕಟ್ಟನ್ನು ನಿರ್ಮಿಸುವ ಉದ್ದೇಶದಿಂದ ಯೋಜನೆ ರೂಪಿಸಿದೆ ಎಂಬುದಾಗಿ ತಿಳಿಸಿದ್ದು ಲೋಕ ಸಭೆಯ ಬುಲೆಟಿನ್ ಕ್ರಿಪ್ಟೋ ಕರೆನ್ಸಿ ಹಾಗೂ ಅಧಿಕೃತ ಡಿಜಿಟಲ್ ಕರೆನ್ಸಿ ಬಿಲ್ 2021ರ ಕುರಿತು ಯಾವುದೇ ಇತರ ವಿವರಗಳನ್ನು ನೀಡಿಲ್ಲ.

ಭಾರತದಲ್ಲಿ ಕ್ರಿಪ್ಟೋ ಮಾರುಕಟ್ಟೆ:

ಕೆಲವು ವಿನಾಯಿತಿಗಳನ್ನು ಹೊರತುಪಡಿಸಿ ಖಾಸಗಿ ಕ್ರಿಪ್ಟೋ ಕರೆನ್ಸಿಗಳ ಮೇಲೆ ಭಾರತದ ನಿಷೇಧದ ಕುರಿತಾಗಿರುವ ಸುದ್ದಿಗಳು ಹರಿದಾಡುತ್ತಿದ್ದರೂ, ಕ್ರಿಪ್ಟೋ ಮಾರುಕಟ್ಟೆಗಳು ಮಾರ್ಪಡಿಸಲಾಗದ ರೀತಿಯಲ್ಲಿ ತ್ವರಿತವಾಗಿ ಮುನ್ನುಗ್ಗುತ್ತಿವೆ. ಬಿಟ್‌ಕಾಯಿನ್ ತನ್ನ ಸ್ಥಾನವನ್ನು 57,000 ಡಾಲರ್ ಗುರುತಿನೊಂದಿಗೆ ನಿರ್ವಹಿಸಿದ್ದು ಬಿಟ್‌ಕಾಯಿನ್‌ನ ಟ್ರೆಂಡ್‌ಗಾಗಿ ದೈನಂದಿನ ಸಮಯವು $57,000-$58,000 ಮಟ್ಟಗಳಲ್ಲಿ ಮರುಪರೀಕ್ಷೆಯ ಬೆಂಬಲ ಸೂಚಿಸುತ್ತಿದೆ. ಇಲ್ಲಿಂದ ಬಿಟ್‌ಕಾಯಿನ್ ಮತ್ತಷ್ಟು ಕುಸಿದರೆ, ಮುಂದಿನ ಬೆಂಬಲ ಮಟ್ಟವು $53,000 ಎಂಬುದಾಗಿ WazirX ಟ್ರೇಡ್ ಡೆಸ್ಕ್ ತಿಳಿಸಿದೆ.

ಇದರೊಂದಿಗೆ ಕಾರ್ಡಾನೊ, ಸೋಲಾನಾ, ಎಕ್ಸ್‌ಆರ್‌ಪಿ ಕ್ರಿಪ್ಟೋ ಕರೆನ್ಸಿಗಳು ಕೂಡ ಕಳೆದ 24 ಗಂಟೆಗಳಲ್ಲಿ ತೀವ್ರ ಕುಸಿತ ಕಂಡಿದೆ. ಸೋಲಾನಾ ಶೇಕಡಾ 2.18ರಷ್ಟು ಕುಸಿದು 215.86 ಡಾಲರ್‌ಗೆ ತಲುಪಿದರೆ ಕಾರ್ಡಾನೋ ಶೇಕಡಾ 6.64 ರಷ್ಟು ಕುಸಿದು 1.68 ಡಾಲರ್‌ಗೆ ತಲುಪಿದೆ. XRP ಶೇಕಡಾ 1.40 ರಷ್ಟು ಕುಸಿದು 1.04 ಡಾಲರ್‌ಗೆ ತಲುಪಿದೆ.

ವಿವಿಧ ಪಾಲುದಾರರಿಂದ ಅಭಿಪ್ರಾಯ ಪಡೆದುಕೊಳ್ಳಲು ಸಭೆ ನಡೆಸಿದ ಕೇಂದ್ರ:

ಭವಿಷ್ಯದ ಕಡೆಗೆ ನೋಟಬೀರುವ ಹಾಗೂ ಪ್ರಗತಿಪರ ನಿಯಂತ್ರಣ ಸ್ಥಾಪಿಸುವ ಉದ್ದೇಶವನ್ನು ಸರಕಾರದ ಯೋಜನೆಗಳು ಹೊಂದಿವೆ ಎಂಬುದಾಗಿ ಕೇಂದ್ರ ಸರಕಾರದ ಮೂಲಗಳು ಈ ಹಿಂದೆಯೇ ಉಲ್ಲೇಖಿಸಿದ್ದು, ಸಂಸತ್ತಿನ ಹಣಕಾಸು ಸ್ಥಾಯಿ ಸಮಿತಿಯು ಉದ್ಯಮದ ವಿವಿಧ ಪಾಲುದಾರರಿಂದ ಅಭಿಪ್ರಾಯಗಳನ್ನು ಪಡೆದುಕೊಳ್ಳಲು ಸಭೆ ನಡೆಸಿದೆ.

ಮೋದಿ ಕರೆ:

ಉದಯೋನ್ಮುಖ, ನಿರ್ಣಾಯಕ ಮತ್ತು ಸೈಬರ್ ತಂತ್ರಜ್ಞಾನಗಳ ವೇದಿಕೆಯಾದ ಸಿಡ್ನಿ ಡಯಲಾಗ್ ಉದ್ದೇಶಿಸಿ ಮಾತನಾಡಿದ ಮೋದಿ ಕ್ರಿಪ್ಟೋ ಕರೆನ್ಸಿ ಅಥವಾ ಬಿಟ್‌ಕಾಯಿನ್‌ಗೆ ಸಂಬಂಧಿಸಿದಂತೆ ಯುವಕರು ತಪ್ಪುದಾರಿಗೆ ಹೋಗುವುದನ್ನು ತಡೆಗಟ್ಟಬೇಕು. ಈ ನಿಟ್ಟಿನಲ್ಲಿ ಎಲ್ಲಾ ಪ್ರಜಾಸತ್ತಾತ್ಮಕ ರಾಷ್ಟ್ರಗಳು ಜೊತೆಯಾಗಿ ಕೆಲಸ ಮಾಡಬೇಕು ಎಂದು ಕರೆ ನೀಡಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಖಾಸಗಿ ಡಿಜಿಟಲ್ ಕರೆನ್ಸಿಗಳಲ್ಲಿ ಜನರು ಹೂಡಿಕೆ ಮಾಡುತ್ತಿರುವುದರಿಂದ ಕ್ರಿಪ್ಟೋ ಕರೆನ್ಸಿಯ ಮೇಲಿನ ಆಸಕ್ತಿ ತೀಕ್ಷ್ಣತೆ ಪಡೆದುಕೊಂಡಿದೆ. ಬ್ರೋಕರ್ ಡಿಸ್ಕವರಿ (broker discovery) ಹಾಗೂ ಹೋಲಿಕೆ ಪ್ಲಾಟ್‌ಫಾರ್ಮ್ ಬ್ರೋಕರ್‌ಚೂಸರ್ (BrokerChooser) ದೇಶವು ಇದೀಗ ವಿಶ್ವದಲ್ಲೇ 10 ಕೋಟಿಗಿಂತಲೂ ಹೆಚ್ಚಿನ ಕ್ರಿಪ್ಟೋ ಮಾಲೀಕರನ್ನು ಹೊಂದಿದೆ ಎಂದು ತಿಳಿಸಿದೆ.

ಏರಿಳಿತಗಳ ಅಸಾಮಾನ್ಯ ಮಿಶ್ರಣ:

ಕಳೆದ 24 ಗಂಟೆಗಳು ಕ್ರಿಪ್ಟೋ ಕರೆನ್ಸಿ ಮಾರುಕಟ್ಟೆಯಾದ್ಯಂತ ಏರಿಳಿತಗಳ ಅಸಾಮಾನ್ಯ ಮಿಶ್ರಣವಾಗಿದೆ. ಚಳಿಗಾಲದ ಅಧಿವೇಶನದಲ್ಲಿ ಭಾರತದಲ್ಲಿನ ಕ್ರಿಪ್ಟೋ ಕರೆನ್ಸಿ ಮಸೂದೆ ಚರ್ಚಿಸಲಾಗುವುದು ಮತ್ತು ಭಾರತವು ಎಲ್ಲಾ ಖಾಸಗಿ ಕ್ರಿಪ್ಟೋ ಕರೆನ್ಸಿಗಳನ್ನು ನಿಷೇಧಿಸುವ ಸಾಧ್ಯತೆಯಿದೆ ಎಂದು ವರದಿಗಳು ಸೂಚಿಸಿವೆ.

ಈ ಸುದ್ದಿಯಿಂದಾಗಿ BTCINR ಹಾಗೂ USDTINRನಂತಹ ಎಲ್ಲಾ INR ಟ್ರೇಡಿಂಗ್ ಪೇರ್‌ಗಳಿಗೆ ಭಾರಿ ನಷ್ಟವನ್ನುಂಟು ಮಾಡಿದೆ. ಅದೂ ಅಲ್ಲದೆ ಹೆಚ್ಚಿನ ಜನರು ಸ್ಥಾನಗಳನ್ನು ಮುಚ್ಚುವುದು ಇಲ್ಲದಿದ್ದರೆ ತಮ್ಮ ಸ್ವತ್ತುಗಳನ್ನು ಇತರ ಜಾಗತಿಕ ವಿನಿಮಯ ಕೇಂದ್ರಗಳಿಗೆ ವರ್ಗಾಯಿಸುವುದನ್ನು ಭಾರತೀಯ ಕ್ರಿಪ್ಟೋ ಕರೆನ್ಸಿ ವಿನಿಮಯಗಳು ನೋಡಿದೆ ಎಂದು ಮುಡ್ರೆಕ್ಸ್-ಎ ಗ್ಲೋಬಲ್ ಕ್ರಿಪ್ಟೋ ಟ್ರೇಡಿಂಗ್ ಪ್ಲಾಟ್‌ಫಾರ್ಮ್‌ನ ಸಿಇಒ ಮತ್ತು ಸಹ-ಸಂಸ್ಥಾಪಕ ಎಡುಲ್ ಪಟೇಲ್ ತಿಳಿಸಿದ್ದಾರೆ.

ಕೃಪೆ: ನ್ಯೂಸ್ 18 ಕನ್ನಡ

Edited By : Vijay Kumar
PublicNext

PublicNext

24/11/2021 02:13 pm

Cinque Terre

17.98 K

Cinque Terre

0

ಸಂಬಂಧಿತ ಸುದ್ದಿ