ಬೆಂಗಳೂರು: ಹಲವು ತಿಂಗಳುಗಳ ನಂತರ ತೈಲ ಬೆಲೆ ಕೊಂಚ ಇಳಿಕೆಯಾಗಿದೆ. ಇದರಿಂದ ದೇಶದ ಸಾಮಾನ್ಯರು ಕೊಂಚ ನಿರಾಳರಾಗಿದ್ದಾರೆ. ಆದ್ರೆ ಈಗ ಮತ್ತೊಂದು ಶಾಕ್ ಎದುರಾಗಲಿದೆ. ವಾಣಿಜ್ಯ ಉದ್ದೇಶದ ಸಿಲಿಂಡರ್ ಬೆಲೆ ಈಗಾಗಲೇ ಎರಡು ಸಾವಿರಕ್ಕೂ ಮಿಗಿಲಾಗಿದೆ. ಹೀಗಾಗಿ ಹೊಟೇಲ್ ಉದ್ಯಮಿಗಳಿಗೆ ಸಂಕಷ್ಟ ಎದುರಾಗಿದ್ದು ಊಟ-ತಿಂಡಿಯ ಬೆಲೆ ಹೆಚ್ಚಳವಾಗುವ ಸಾಧ್ಯತೆ ಇದೆ.
1,794 ರೂ.ಗೆ ಸಿಗುತ್ತಿದ್ದ 19 ಕೆಜಿ ತೂಕದ ಒಂದು ವಾಣಿಜ್ಯ ಸಿಲಿಂಡರ್ ನ ಬೆಲೆ ಇದೀಗ 2060 ರೂ. ಗೆ ಏರಿಕೆಯಾಗಿದೆ. ಇದು ಕೊರೊನಾ ಲಾಕ್ ಡೌನ್ ನಿಂದ ಸಂಕಷ್ಟದಲ್ಲಿರುವ ಹೋಟೆಲ್ ಉದ್ಯಮವನ್ನು ಮತ್ತಷ್ಟು ಆರ್ಥಿಕನಷ್ಟಕ್ಕೆ ತಳ್ಳಲಿದೆ ಹೀಗಾಗಿ ಹೋಟೆಲ್ ಗಳಲ್ಲಿ ಊಟ, ತಿಂಡಿ ಬೆಲೆಗಳನ್ನು ಶೇ. 10 ರಿಂದ 15 ರಷ್ಟು ಏರಿಕೆ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
PublicNext
05/11/2021 08:09 am