ನ್ಯೂಯಾರ್ಕ್ : ಸಾಮಾಜಿಕ ಜಾಲತಾಣಗಳಲ್ಲಿ ಪ್ರಮುಖವಾಗಿದ್ದ ಫೇಸ್ ಬುಕ್ ಹೆಸರು ಬದಲಾಗಿದೆ. ಈ ಕುರಿತು ಫೇಸ್ ಬುಕ್ ಸಿಇಒ ಮಾರ್ಕ್ ಜುಕರ್ ಬರ್ಗ್ ಹೇಳಿಕೆ ನೀಡಿದ್ದು, ಫೇಸ್ ಬುಕ್ ಇನ್ಮುಂದೆ 'ಮೆಟಾ' ಎಂದು ಮರುನಾಮಕರಣವಾಗಿದೆ.ಫೇಸ್ ಬುಕ್ ಕಾರ್ಪೊರೇಟ್ ಕಂಪನಿಯ ಹೆಸರು ಬದಲಾಯಿಸಲಾಗಿದೆಯೇ ಹೊರತು ನಮ್ಮ ಅಪ್ಲಿಕೇಷನ್ ಗಳು ಹಾಗೂ ಅವರ ಬ್ರ್ಯಾಂಡ್ ಗಳು ಬದಲಾಗುತ್ತಿಲ್ಲ ಎಂದು ತಿಳಿಸಿದ್ದಾರೆ.
ಕಂಪನಿಯು ತನ್ನ ಮಾರುಕಟ್ಟೆ ಶಕ್ತಿ, ಅದರ ಅಲ್ಗಾರಿದಮಿಕ್ ನಿರ್ಧಾರಗಳು ಮತ್ತು ಅದರ ಪ್ಲಾಟ್ ಫಾರ್ಮ್ ಗಳಲ್ಲಿನ ದುರುಪಯೋಗಗಳ ಪೋಲೀಸಿಂಗ್ ಮೇಲೆ ಜನಪ್ರತಿನಿಧಿಗಳು ಹಾಗೂ ನಿಯಂತ್ರಕರಿಂದ ಟೀಕೆಗಳನ್ನು ಎದುರಿಸುತ್ತಿರುವ ಕಾರಣ ಈ ಹೆಸರು ಬದಲಾವಣೆಯಾಗಿದೆ.
ಕಂಪನಿಯ ವಾರ್ಷಿಕ ಸಭೆಯಲ್ಲಿ ಮಾತನಾಡಿದ ಮಾರ್ಕ್ ಜುಕರ್ ಬರ್ಗ್ ಮುಂದಿನ ಒಂದು ದಶಕದಲ್ಲಿ ಮೆಟಾವರ್ಸ್ 100 ಕೋಟಿ ಜನರನ್ನು ತಲುಪಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
PublicNext
29/10/2021 10:20 am