ನವದೆಹಲಿ : ದಿನದಿಂದ ದಿನಕ್ಕೆ ಜನಸಾಮಾನ್ಯರು ಜೀವನ ನಡೆಸುವುದೇ ದುಸ್ತರವಾಗುತ್ತಿದೆ. ಈಗಾಗಲೇ ಪೆಟ್ರೋಲ್ ತೈಲ ಬೆಲೆ ಏರಿಕೆರಿಂದ ಕಂಗೆಟ್ಟ ಮಂದಿಗೆ ಅಡುಗೆ ಅನಿಲ ದರ ಏರಿಕೆಯಿಂದ ಬರಸಿಡಿಲು ಬಡಿದಂತಾಗಿದೆ. ಕೇಂದ್ರ ಸರ್ಕಾರ ಮುಂದಿನ ವಾರ ಮತ್ತೊಂದು ಭರ್ಜರಿ ಶಾಕ್ ನೀಡುವ ಸಾಧ್ಯತೆ ಇದೆ. ನ.1ರಂದು ಪರಿಷ್ಕರಣೆಯಾಗಲಿರುವ ಎಲ್ ಪಿಜಿ ದರದ ವೇಳೆ ಭಾರೀ ಪ್ರಮಾಣದಲ್ಲಿ ದರ ಹೆಚ್ಚಳದ ಸಾಧ್ಯತೆ ಇದೆ.
ಸರ್ಕಾರ ಅಂತಾರಾಷ್ಟ್ರೀಯ ಮಾರುಕಟ್ಟೆದರಗಳಿಗೆ ಅನ್ವಯವಾಗಿ ಪ್ರತಿ 15 ದಿನಕ್ಕೊಮ್ಮೆ ಎಲ್ ಪಿಜಿ ದರ ಪರಿಷ್ಕರಣೆ ಮಾಡುತ್ತಿದೆ. ಆದರೆ ಎಲ್ಪಿಜಿ ದರ ಭಾರೀ ಏರಿಕೆಯಾದ ಹೊರತಾಗಿಯೂ ಏಕಾಏಕಿ ಅದರ ಹೊರೆಯನ್ನು ಜನರಿಗೆ ಹೊರಿಸದೇ ಇರಲು ಸರ್ಕಾರ ನಿರ್ಧರಿಸಿದ ಕಾರಣ ಪ್ರತಿ 15 ದಿನಗಳಿಗೊಮ್ಮೆ 25 ರು. ಏರಿಕೆ ಮಾಡುತ್ತಾ ಬರುತ್ತಿದೆ.
ಹಿಂದಿನ ಪರಿಷ್ಕರಣೆ ವೇಳೆ 15 ರು. ಹೆಚ್ಚಳ ಮಾಡಲಾಗಿತ್ತು. ಆದರೆ ಹೀಗೆ ವಾಸ್ತವ ದರಕ್ಕಿಂತ ಕಡಿಮೆ ಪ್ರಮಾಣದಲ್ಲಿ ಹೆಚ್ಚಳ ಮಾಡುತ್ತಿರುವ ಹಿನ್ನೆಲೆಯಲ್ಲಿ ತೈಲ ಕಂಪನಿಗಳು ಇದೀಗ ಪ್ರತಿ ಸಿಲಿಂಡರ್ ಮೇಲೆ ಅನುಭವಿಸುತ್ತಿರುವ ನಷ್ಟ100 ರು. ದಾಟಿದೆ. ಹೀಗಾಗಿ ನ.1ರಂದು ಮಾಡಲಾಗುವ ಪರಿಷ್ಕರಣೆ ವೇಳೆ ಹೆಚ್ಚಿನ ಪ್ರಮಾಣದ ದರ ಏರಿಕೆಯಾಗುವ ಸಾಧ್ಯತೆ ಇದೆ.
PublicNext
28/10/2021 08:30 am