ಅಮೆರಿಕಾ: ವಿಶ್ವದ ಶ್ರೀಮಂತ ವ್ಯಕ್ತಿ ಎಲಾನ್ ಮಸ್ಕ್ ತನ್ನ ಮನೆಯನ್ನ ಮಾರಾಟಕ್ಕಿಟ್ಟಿದ್ದಾರೆ. ಆದರೆ ಅದರ ಖರೀದಿಯ
ಬೆಲೆ ಕೇಳಿದ್ರೆ ನೀವೂ ದಂಗ್ ಆಗುತ್ತೀರಾ. ಅಷ್ಟಿದೆ. ಬನ್ನಿ ಹೇಳ್ತಿವಿ
ಎಲಾನ್ ಮಸ್ಕ್ ವಿಶ್ವದ ಶ್ರೀಮಂತ ವ್ಯಕ್ತಿ. ತನ್ನ ಅಪಾರ ಆಸ್ತಿಯಿಂದಲೇ ಹೆಚ್ಚು ಗಮನ ಸೆಳೆದ್ದಾರೆ. 227 ಬಿಲಿಯನ್ ನಷ್ಟು ಆಸ್ತಿ ಹೊಂದಿರೋ (ಸುಮಾರು 17 ಲಕ್ಷ ಕೋಟಿ ರೂ ಮೌಲ್ಯದ ಆಸ್ತಿ) ಎಲಾನ್ ಮಸ್ಕ್, ತನ್ನ ಅಮೆರಿಕದ ಕ್ಯಾಲಿಪೋರ್ನಿಯಾದ ಬೇ ಏರಿಯಾದಲ್ಲಿರೋ ಮನೆಯನ್ನ ಮಾರಾಟಕ್ಕೆ ಇಟ್ಟಿದ್ದಾರೆ. ಇದರ ಬೆಲೆ 32 ಮಿಲಿಯನ್ ಡಾಲರ್ (2,41,49,32,800.00) ಆಗಿದೆ. ಆದರೆ, ಇಷ್ಟು ದುಡ್ಡಿಗೆ ಆ ಮನ್ನೆಯನ್ನ ಯಾರು ಖರೀದಿಸುತ್ತಾರೆ ಅನ್ನೋದೇ ಈಗೀನ ಕುತೂಹಲ.
PublicNext
13/10/2021 07:10 pm