ಬೆಂಗಳೂರು : ದುಬಾರಿ ದುನಿಯಾದಲ್ಲಿ ದಿನದಿಂದ ದಿನಕ್ಕೆ ಬದುಕು ನಡೆಸುವುದು ದುಸ್ಥರವಾಗುತ್ತಿದೆ. ಸದ್ಯ ದೇಶದಲ್ಲಿ ಪೆಟ್ರೋಲ್-ಡೀಸೆಲ್ ಬೆಲೆ ಸಾರ್ವಕಾಲಿಕ ದಾಖಲೆ ಬರೆದಿದೆ. ಇಂದೂ ಸಹ ರಾಷ್ಟ್ರಾದ್ಯಂತ ಪೆಟ್ರೋಲ್-ಡೀಸೆಲ್ ಬೆಲೆ 1.33 ರೂ ವರೆಗೆ ಏರಿಕೆಯಾಗಿದೆ.
ಕರ್ನಾಟಕದ ಪೈಕಿ ಬಳ್ಳಾರಿಯಲ್ಲಿ ಅತ್ಯಧಿಕ ಅಂದರೆ 1 ಲೀಟರ್ ಪೆಟ್ರೋಲ್ ಅನ್ನು 107.15 ರೂ.ಗೆ ಮತ್ತು ಡೀಸೆಲ್ ಅನ್ನು 97.29 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಇದಲ್ಲದೆ, ದೇಶದ ಪ್ರಮುಖ ನಗರಗಳಲ್ಲೂ ಸಹ ತೈಲ ಬೆಲೆ ಏರಿಕೆ ನಾಗಾಲೋಟ ಮುಂದುವರೆಯುತ್ತಿದೆ.
ಇದಲ್ಲದೆ, ಇಂದು ಚೆನ್ನೈನಲ್ಲಿ ಪೆಟ್ರೋಲ್ ಬೆಲೆ 99.58 ರೂ ಇದ್ದರೆ ಡೀಸೆಲ್ ಬೆಲೆ 94.74 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಅದರಂತೆ ಹೈದ್ರಾಬಾದ್ ನಲ್ಲಿ ಪೆಟ್ರೋಲ್ ಬೆಲೆ 105.74 ರೂ ಆಗಿದ್ದರೆ, ಡೀಸೆಲ್ ಬೆಲೆ 98.06 ರೂ.ಗೆ ಮಾರಾಟ ಮಾಡಲಾಗುತ್ತಿದೆ.
PublicNext
02/10/2021 09:25 am