ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಕ್ಟೋಬರ್ 1ರಿಂದ ಹೊಸ ರೂಲ್ಸ್ : ಎಟಿಎಂನಲ್ಲಿ ಹಣವಿಲ್ಲದಿದ್ರೆ ದಂಡ ಫಿಕ್ಸ್

ನವದೆಹಲಿ: ಜನಸಾಮಾನ್ಯರಿಗೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ಶುಭ ಸುದ್ದಿ ನೀಡಿದೆ. ಎಟಿಎಂನಲ್ಲಿ 10 ಗಂಟೆಗಿಂತ ಹೆಚ್ಚು ಕಾಲ ನಗದು ಇಲ್ಲದೇ ಹೋದರೆ ಅಂಥ ಎಟಿಎಂ ನಿರ್ವಹಿಸುತ್ತಿರುವ ಬ್ಯಾಂಕಿಗೆ ಪ್ರತಿ ಎಟಿಎಂಗೆ 10,000 ರೂ. ದಂಡ ವಿಧಿಸುವುದಾಗಿ ಘೋಷಿಸಿದೆ.

ಹಣಕ್ಕಾಗಿ ಎಟಿಎಂನಿಂದ ಎಟಿಎಂಗೆ ಅಲೆದಾಡುವ ಸಂಕಷ್ಟ ತಪ್ಪಿಸಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ವೈಟ್ ಲೇಬಲ್ ಎಟಿಎಂಗಳಾದರೆ ಅಂತಹ ಎಟಿಎಂಗಳಿಗೆ ಹಣ ತುಂಬುವ ಹೊಣೆಗಾರಿಕೆ ಹೊತ್ತುಕೊಂಡಿರುವ ಬ್ಯಾಂಕು ಅನ್ನು ಬಾಧ್ಯಸ್ಥನನ್ನಾಗಿ ಪರಿಗಣಿಸಲಾಗುತ್ತದೆ. ಹೊಸ ಉಪಕ್ರಮ ಅಕ್ಟೋಬರ್ 1ರಿಂದ ಜಾರಿ ಆಗಲಿದೆ.

ತಿಂಗಳುಗಟ್ಟಲೆ ಕೆಲವು ಎಟಿಎಂಗಳು ನಿಷ್ಕ್ರಿಯವಾಗಿರು ವುದು ಗಮನಕ್ಕೆ ಬಂದಿದೆ. ಸಾರ್ವಜನಿಕರಿಗೆ ಸಮರ್ಪಕವಾಗಿ ಎಟಿಎಂ ಸೇವೆ ಒದಗಿಸುವುದು ಆಯಾ ಬ್ಯಾಂಕುಗಳ ಹೊಣೆ ಎಂದು ಆರ್ ಬಿಐ ಎಚ್ಚರಿಸಿದೆ.

Edited By : Nirmala Aralikatti
PublicNext

PublicNext

12/08/2021 07:28 am

Cinque Terre

47.77 K

Cinque Terre

24

ಸಂಬಂಧಿತ ಸುದ್ದಿ