ನವದೆಹಲಿ : 49 ರೂಪಾಯಿಯ ಮಾಸಿಕ ರಿಚಾರ್ಜ್ ಪ್ಲಾನ್ ಅನ್ನು ಟೆಲಿಕಾಂ ಸಂಸ್ಥೆಯಾಗಿರುವ ಏರ್ ಟೆಲ್ ಸಂಸ್ಥೆಯು ತೆಗೆದುಹಾಕಿ ಗ್ರಾಹಕರಿಗೆ ಶಾಕ್ ನೀಡಿದೆ. ಇನ್ನು ಮುಂದೆ ಏರ್ ಟೆಲ್ ಗ್ರಾಹಕರು 49 ರೂಪಾಯಿ ಮಾಸಿಕ ರಿಚಾರ್ಜ್ ಮಾಡುವ ಅವಕಾಶವಿರುವುದಿಲ್ಲ.
79 ರೂಪಾಯಿ ರಿಚಾರ್ಜ್ ಮಾಡಿದರೆ, 28 ದಿನಗಳಿಗೆ 64 ರೂಪಾಯಿ ಟಾಕ್ ಟೈಮ್ ಹಾಗೂ 200 ಎಂಬಿ ಡೇಟಾ ಕೊಡಲಾಗುವುದು. ಈ ಹಿಂದಿನ 49 ರೂಪಾಯಿ ರಿಚಾರ್ಜ್ ನಲ್ಲಿ 38 ರೂಪಾಯಿ ಟಾಕ್ ಟೈಮ್ ಹಾಗೂ 100 ಎಂಬಿ ಡೇಟಾ ಸಿಗುತ್ತಿತ್ತು. ಗ್ರಾಹಕರು ಹೆಚ್ಚು ಸಮಯ ಮಾತನಾಡುವ ಅವಕಾಶ ಸಿಗಲಿ ಎಂದು 49 ರೂಪಾಯಿ ಯೋಜನೆ ಬದಲು 79 ರೂಪಾಯಿ ಯೋಜನೆ ಜಾರಿಗೆ ತಂದಿರುವುದಾಗಿ ಸಂಸ್ಥೆ ಹೇಳಿಕೊಂಡಿದೆ.
ಈ ಯೋಜನೆಯು ಇದೇ ತಿಂಗಳು 29ರಿಂದಲೇ ಜಾರಿಯಲ್ಲಿದೆ.
PublicNext
28/07/2021 04:26 pm