ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

7000 ಮೈಲಿ ಓಡಿ ಇತಿಹಾಸ ನಿರ್ಮಿಸಿದ್ದ ಟಾಟಾ " ಮರ್ಸಿಡಿಸ್ ಬೆಂಜ್ ಟ್ರಕ್ ''

ಕಾರು, ಲಾರಿ ಇನ್ನಿತರ ವಾಹನಗಳ ಉತ್ಪಾದನೆ ಹಾಗೂ ಮಾರಾಟದಲ್ಲಿ ಪೈಪೋಟಿ ಸಹಜ. ಬಾಳಿಕೆ, ಗುಣಮಟ್ಟ ಮೈಲೇಜ್, ತಂತ್ರಜ್ಞಾನ ಹಾಗೂ ಸೌಲಭ್ಯಗಳಲ್ಲಿ ತಮ್ಮ ವಾಹನಗಳೇ ಅತಿ ಉತ್ಕೃಷ್ಟ ಎಂದು ಬಿಂಬಿಸಲು ಪ್ರತಿಷ್ಠಿತ ಕಂಪನಿಗಳು ಹರಸಾಹಸ ಮಾಡುತ್ತಿರುವುದನ್ನು ನಾವು ಮಾಧ್ಯಮಗಳಲ್ಲಿ ನೋಡುತ್ತೇವೆ.

ಆದರೆ ಯಾವುದೇ ತಾಂತ್ರಿಕ ಸಮಸ್ಯೆ ಇಲ್ಲದೆ ತಮ್ಮ ವಾಹನ ಸಾವಿರಾರು ಮೈಲು ಓಡಿದೆ ಎಂದು ತೋರಿಸುವ ಸಾಹಸ ಯಾರೂ ಮಾಡಿಲ್ಲ . ಸುಮಾರು 66 ವರ್ಷಗಳ ಹಿಂದೆ ದೇಶದ ಹೆಮ್ಮೆಯ ಟಾಟಾ ಕಂಪನಿ ಇದನ್ನು ಸಾಧಿಸಿ ತೋರಿಸಿದೆ. ಜೆಮ್ಶೇಟ್ ಪುರದಲ್ಲಿ ತಯಾರಿಸಿದ ಟಾಟಾ ಕಂಪನಿ " ಮರ್ಸಿಡಿಸ್ ಬೆಂಜ್ ಟ್ರಕ್ '' 1955 ರಲ್ಲಿ ಚಿಕ್ಕ ತಾಂತ್ರಿಕ ತೊಂದರೆ ಇಲ್ಲದೆ 7000 ಮೈಲಿ ಸಂಚರಿಸಿ ಭಾರತದ ಹಿರಿಮೆ ಗರಿಮೆ ಹೆಚ್ಚಿಸಿತ್ತು.

11 ರಾಷ್ಟ್ರಗಳ ಕಡಿದಾದ ಬೆಟ್ಟ ಗುಡ್ಡಗಳ ಮೂಲಕ ಮರ್ಸಿಡಿಸ್ ಬೆಂಜ್ ಟ್ರಕ್ ಸಂಚರಿಸಬೇಕಾಗಿತ್ತು.ಸುಮಾರು 1000 ಮೈಲಿಗಳಂತೂ ಟ್ರಕ್ ಗಳಿಗೆ ಸವಾಲಾಗಿತ್ತು. ಸುರಿಯುತ್ತಿರುವ ಧಾರಾಕಾರ ಮಳೆ, ಎಂಜಿನ್ ಮುಳುಗುವ ಮಟ್ಟದ ಹಳ್ಳ ಕೊಳ್ಳಗಳು ಗುಂಡಿಗಳಿಂದ ಕೂಡಿ ರಸ್ತೆಯಲ್ಲಿ ಟಾಟಾ ಲಾರಿಗಳು ಮಾಮೂಲಿನಂತೆ ಓಡಿದವಂತೆ.

ಕುತೂಹಲಕಾರಿ ವಿಷಯವೆಂದರೆ ಇಸ್ತಾಂಬುಲ್ ನಲ್ಲಿ, ಡಿಆರ್ ಡಿ ಟಾಟಾ ಅವರು (ಜೆಆರ್ ಡಿ ಟಾಟಾ ಅವರ ಸಹೋದರ)ಚಾಲಕರನ್ನು ಬದಿಗೆ ಕುಳ್ಳರಿಸಿಕೊಂಡು ಟ್ರಕ್ ನ್ನು ಸ್ವತಃ ಓಡಿಸಿದ್ದರಂತೆ.

ಟ್ರಕ್ ಅಂತಿಮವಾಗಿ ಭಾರತೀಯ ನೆಲವನ್ನು ತಲುಪಿದಾಗ ಸಾರ್ವಜನಿಕರಿಂದ ಐತಿಹಾಸಿಕ ಸ್ವಾಗತ ದೊರೆಯಿತು. ಭಾರತೀಯ ನಿರ್ಮಿತ ಟಾಟಾ ಟ್ರಕ್ ಗಳು ಯಾವುದೇ ಸಮಸ್ಯೆ ಇಲ್ಲದೆ ಏಳು ಸಾವಿರ ಮೈಲು ದೇಶದ ವಾಹನ ಉದ್ಯಮದ ಇತಿಹಾಸದಲ್ಲಿಯೇ ಪ್ರಪ್ರಥಮ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು.

ಇದು ನಮ್ಮ ಭಾರತದ ಹೆಮ್ಮೆಯಲ್ಲವೆ?

Edited By :
PublicNext

PublicNext

28/02/2021 09:20 am

Cinque Terre

61.89 K

Cinque Terre

4

ಸಂಬಂಧಿತ ಸುದ್ದಿ