ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪೆಟ್ರೋಲ್ - ಡೀಸೆಲ್ ದರ ಏರಿಕೆ :ಯಾವ ನಗರದಲ್ಲಿ ಎಷ್ಟಿದೆ..?

ನವದೆಹಲಿ : ದೇಶಾದ್ಯಂತದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಗ್ರಾಹಕರ ಜೇಬಿಗೆ ದೊಡ್ಡ ಕತ್ತರಿ ಹಾಕುತ್ತಿದೆ ತೈಲ ಮಾರುಕಟ್ಟೆ ಕಂಪನಿಗಳು ಮಂಗಳವಾರ ಪೆಟ್ರೋಲ್ ಮತ್ತು ಡೀಸೆಲ್ ಪಂಪ್ ಬೆಲೆಯನ್ನು ಲೀಟರ್ ಗೆ 35 ಪೈಸೆ ಹೆಚ್ಚಿಸಿವೆ. ಇದರೊಂದಿಗೆ ರಾಷ್ಟ್ರ ರಾಜಧಾನಿಯಲ್ಲಿ ಪೆಟ್ರೋಲ್ ಗೆ ಈಗ ಲೀಟರ್ ಗೆ 90.93 ರೂ. ಮತ್ತು ಡೀಸೆಲ್ 81.32 ರೂ.ಯಲ್ಲಿ ಮಾರಾಟ ಆಗುತ್ತಿದೆ.

ದೇಶಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ರಾಜ್ಯ ಮಟ್ಟದಲ್ಲಿ ಸ್ಥಳೀಯ ತೆರಿಗೆ ಮಟ್ಟ ಅವಲಂಬಿಸಿ ಪ್ರತಿ ಲೀಟರ್ ಗೆ 32 - 40 ಪೈಸೆ ನಡುವೆ ಹೆಚ್ಚಳವಾಗಿದೆ. ಮಂಗಳವಾರ ಬೆಲೆ ಏರಿಕೆಯು ಜಾಗತಿಕ ಮಾರುಕಟ್ಟೆಗಳಲ್ಲಿ ತೈಲ ಉತ್ಪನ್ನದ ಬೆಲೆಯಲ್ಲಿನ ಚಲನೆ ಅನುಸರಿಸಿದೆ ಎಂದು ಒಎಂಸಿ ಮೂಲಗಳು ತಿಳಿಸಿವೆ.

ಬ್ರೆಂಟ್ ಕಚ್ಚಾ ದರವು ಮಂಗಳವಾರ ಶೇ 2ಕ್ಕಿಂತ ಹೆಚ್ಚಾಗಿದೆ. ಈಗ ಬ್ಯಾರೆಲ್ ಗೆ 67 ಡಾಲರ್ ತಲುಪಿದೆ. ಕೆಲವು ದಿನಗಳ ಹಿಂದೆಯಷ್ಟೆ ಬ್ಯಾರೆಲ್ ಗೆ 60 ಡಾಲರ್ ಗಿಂತ ಕಡಿಮೆ ಮಟ್ಟದಲ್ಲಿತ್ತು.

Edited By : Nirmala Aralikatti
PublicNext

PublicNext

24/02/2021 11:40 am

Cinque Terre

34.16 K

Cinque Terre

0

ಸಂಬಂಧಿತ ಸುದ್ದಿ