ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಆ ಒಂದೇ ಒಂದು ಟ್ವೀಟ್ ಗೆ 1.14 ಲಕ್ಷ ಕೋಟಿ ಲಾಸ್ ಆಯ್ತು

ಬಿಟ್ ಕಾಯಿನ್ ಮತ್ತು ಎಥರ್ ಕ್ರಿಪ್ಟೊಕರೆನ್ಸಿ ದರ “ವಿಪರೀತ ಹೆಚ್ಚಾದಂತೆ ಕಾಣುತ್ತಿದೆ” ಎಂದು ಎಲಾನ್ ಮಸ್ಕ್ ಶನಿವಾರ ಮಾಡಿದ ಒಂದು ಟ್ವೀಟ್ ನಿಂದ ಟೆಸ್ಲಾ ಕಂಪೆನಿಯ ಷೇರಿನ ಬೆಲೆ ನೆಲ ಕಚ್ಚಿತು. ಎರಡು ವಾರದ ಹಿಂದಷ್ಟೇ, ಬಿಟ್ ಕಾಯಿನ್​ನಲ್ಲಿ ನೂರೈವತ್ತು ಕೋಟಿ ಅಮೆರಿಕನ್ ಡಾಲರ್ ಹೂಡಿದ್ದಾಗಿ ಘೋಷಿಸಿತ್ತು. ವಿಶ್ವದ ಅತಿ ದೊಡ್ಡ ಕ್ರಿಪ್ಟೋಕರೆನ್ಸಿ ಮಂಗಳವಾರದಂದು ಶೇ 12.5ರಷ್ಟು ಕುಸಿದು, 48,071 ಯುಎಸ್​ಡಿ ತಲುಪಿತ್ತು. ಇನ್ನು ಟೆಸ್ಲಾದ ಮಾಡೆಲ್ ವೈ ಸ್ಟ್ಯಾಂಡರ್ಡ್ ಬಗ್ಗೆ ಮಸ್ಕ್ ನೀಡಿದ ಹೇಳಿಕೆ ಕೂಡ ಟೆಸ್ಲಾ ಕಂಪೆನಿಯ ಷೇರು ಬೆಲೆ ಇಳಿಕೆಗೆ ಕಾರಣವಾಗಿದೆ.

ಟೆಸ್ಲಾ ಕಂಪೆನಿಯ ಷೇರಿನ ಬೆಲೆಯಲ್ಲಿ ಏರಿಳಿತ ಆಗುತ್ತಿದ್ದಂತೆ ವಿಶ್ವದ ನಂಬರ್ ಒನ್ ಶ್ರೀಮಂತ ಕುರ್ಚಿಗೆ ಪೈಪೋಟಿ ಕಂಡುಬರುತ್ತಿದೆ. ಮಸ್ಕ್ ಆಸ್ತಿ ಪ್ರಮಾಣ ಈ ವರ್ಷ ಇಲ್ಲಿಯ ತನಕ 1360 ಕೋಟಿ ಯುಎಸ್ ಡಿ ಹೆಚ್ಚಾಗಿದೆ. ಈ ವರದಿಯಲ್ಲಿನ ಲೆಕ್ಕಾಚಾರಗಳು ಬ್ಲೂಮ್ ಬರ್ಗ್ ಬಿಲಿಯನೇರ್ಸ್ ಸೂಚ್ಯಂಕವನ್ನು ಅವಲಂಬಿಸಿದೆ.

Edited By : Nagaraj Tulugeri
PublicNext

PublicNext

23/02/2021 07:41 pm

Cinque Terre

43.5 K

Cinque Terre

0

ಸಂಬಂಧಿತ ಸುದ್ದಿ