ನವದೆಹಲಿ: ಗಣರಾಜ್ಯೋತ್ಸವದ ಸಂದರ್ಭದಲ್ಲಿ ಸರ್ಕಾರಿ ಸ್ವಾಮ್ಯದ ಟೆಲಿಕಾಮ್ ಕಂಪನಿ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (ಬಿಎಸ್‌ಎನ್ಎಲ್) ತನ್ನ ಗ್ರಾಹಕರಿಗೆ ಉಡುಗೊರೆಯನ್ನು ನೀಡುತ್ತಿದೆ.
ತನ್ನ ಎರಡು ದೀರ್ಘಾವಧಿಯ ಯೋಜನೆಗಳ ಸಿಂಧುತ್ವವನ್ನು ಹೆಚ್ಚಿಸಿದೆ ಎಂದು ಬಿಎಸ್ಎನ್ಎಲ್ ಘೋಷಿಸಿದೆ. ಈ ಮೂಲಕ ಬಿಎಸ್ಎನ್ಎಲ್ ದೀರ್ಘಾವಧಿಯ ಯೋಜನೆಗಳಲ್ಲಿ ಹೆಚ್ಚಿನ ಸಿಂಧುತ್ವವನ್ನು ನೀಡುವ ದೃಷ್ಟಿಯಿಂದ ಏರ್‌ಟೆಲ್, ಜಿಯೋ ಮತ್ತು ವೊಡಾಫೋನ್, ಐಡಿಯಾ ಟೆಲಿಕಾಮ್ ನೆಟ್ ವರ್ಕ್ ಗಳನ್ನು ಹಿಂದಿಕ್ಕಿದೆ.
ಬಿಎಸ್ಎನ್ಎಲ್ ತನ್ನ ಬಳಕೆದಾರರಿಗೆ ಒಂದು ವರ್ಷದ ಯೋಜನೆಯಲ್ಲಿ 72 ದಿನಗಳ ಹೆಚ್ಚಿನ ಮಾನ್ಯತೆಯನ್ನು ನೀಡುತ್ತಿದೆ. ಇದು ಸೀಮಿತ ಅವಧಿಯ ಕೊಡುಗೆಯಾಗಿದ್ದು, ಜನವರಿ 31 ರ ನಂತರ ಮುಕ್ತಾಯಗೊಳ್ಳಲಿದೆ ಎಂದು ಬಿ ಎಸ್ ಎನ್ ಎಲ್ ಹೇಳಿದೆ.
2,399 ರೂ.ಗಳ ದೀರ್ಘಾವಧಿಯ ಪ್ರಿಪೇಯ್ಡ್ ಯೋಜನೆಯಲ್ಲಿ 72 ದಿನಗಳ ವಿಸ್ತೃತ ಮಾನ್ಯತೆಯನ್ನು ನೀಡಿದ್ದು, ಈ ಮೂಲಕ 437 ದಿನಗಳು ಆಫರ್ ಲಭ್ಯವಿರಲಿದೆ. 1,999 ರೂ. ಯೋಜನೆಯೊಂದಿಗೆ, 21 ದಿನಗಳವರೆಗೆ ಸಿಂಧುತ್ವವನ್ನು ಹೆಚ್ಚಿಸಲಾಗಿದೆ. ಅಂದರೆ, ನೀವು ಈಗ ಈ ಯೋಜನೆಯನ್ನು ಖರೀದಿಸಿದರೆ, ನಿಮಗೆ 386 ದಿನಗಳ ಸಿಂಧುತ್ವ ಸಿಗುತ್ತದೆ.
PublicNext
23/01/2021 04:38 pm