ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

'ಮುಂದಿನ ಆರ್ಥಿಕ ವರ್ಷದಲ್ಲಿ ಶೇ 8.9ರಷ್ಟು GDP ಪ್ರಗತಿ'

ನವದೆಹಲಿ: 2021ರ ಏಪ್ರಿಲ್ ನಿಂದ ಆರಂಭವಾಗುವ ಹಣಕಾಸು ವರ್ಷದಲ್ಲಿ ಭಾರತದ ಅರ್ಥ ವ್ಯವಸ್ಥೆಯು ಶೇಕಡ 8.9ರ ಪ್ರಗತಿಯೊಂದಿಗೆ ಪುಟಿದೇಳಲಿದೆ ಎಂದು ಐಎಚ್ ಎಸ್ ಮರ್ಕಿಟ್ ಸಂಸ್ಥೆಯು ಅಂದಾಜಿಸಿದೆ.

ಕಳೆದ ತ್ರೈಮಾಸಿಕದಲ್ಲಿ ಆರ್ಥಿಕ ಚಟುವಟಿಕೆಗಳು ಗಣನೀಯ ಚೇತರಿಕೆ ಕಂಡಿರುವ ಕಾರಣ ಮುಂದಿನ ಆರ್ಥಿಕ ವರ್ಷದಲ್ಲಿ ಈ ಮಟ್ಟದ ಪ್ರಗತಿ ಸಾಧ್ಯವಾಗಲಿದೆ ಎಂದು ಅದು ಹೇಳಿದೆ.

'ಭಾರತದ ಅರ್ಥ ವ್ಯವಸ್ಥೆಯು 2020ರಲ್ಲಿ ಅತ್ಯಂತ ದೊಡ್ಡ ಹಿನ್ನಡೆ ಕಂಡಿದೆ.

ಮಾರ್ಚ್ನಿಂದ ಆಗಸ್ಟ್ ಅವಧಿಯಲ್ಲಿ ಆರ್ಥಿಕತೆಯು ಅತೀ ಹೆಚ್ಚುಕುಗ್ಗಿದೆ. ಆದರೆ, ಸೆಪ್ಟೆಂಬರ್ ನಂತರ ಆರ್ಥಿಕ ಚಟುವಟಿಕೆ ಗಳು ಚೇತರಿಸಿಕೊಂಡಿವೆ' ಎಂದು ಸಂಸ್ಥೆ ಹೇಳಿದೆ.

Edited By : Nirmala Aralikatti
PublicNext

PublicNext

09/01/2021 07:30 am

Cinque Terre

62.2 K

Cinque Terre

6

ಸಂಬಂಧಿತ ಸುದ್ದಿ