ನವದೆಹಲಿ : ಚಿನ್ನ, ಬೆಳ್ಳಿ ದರ ಏರಿಕೆ ಆಗಿದೆ. ಸೋಮವಾರ 10 ಗ್ರಾಂ ಚಿನ್ನದ ದರ ₹ 877ರಷ್ಟು ಏರಿಕೆ ಕಂಡು ₹ 50,619ರಂತೆ ಮಾರಾಟವಾಗಿದೆ.
ಬೆಳ್ಳಿ ಧಾರಣೆ ಕೆ.ಜಿ.ಗೆ ₹ 2,012ರಷ್ಟು ಹೆಚ್ಚಾಗಿ ₹ 69,454ಕ್ಕೆ ತಲುಪಿದೆ.
ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಆಗಿರುವ ದರ ಏರಿಕೆಗೆ ಅನುಗುಣವಾಗಿ ದೇಶಿ ಮಾರುಕಟ್ಟೆಯಲ್ಲಿಯೂ ದರದಲ್ಲಿ ಏರಿಕೆ ಕಂಡುಬಂದಿದೆ ಎಂದು ಎಚ್ ಡಿಎಫ್ ಸಿ ಸೆಕ್ಯುರಿಟೀಸ್ ಹೇಳಿದೆ.
ಡಾಲರ್ ಮೌಲ್ಯ ಇಳಿಕೆ ಕಂಡಿರುವುದರಿಂದ ಚಿನ್ನದ ದರ ಹೆಚ್ಚಾಗಿದೆ ಎಂದು ಎಚ್ ಡಿಎಫ್ ಸಿ ಸೆಕ್ಯುರಿಟೀಸ್ನ ಸಂಶೋಧನಾ ವಿಶ್ಲೇಷಕ ತಪನ್ ಪಟೇಲ್ ಹೇಳಿದ್ದಾರೆ.
PublicNext
05/01/2021 08:16 am