ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಎಲೆಕ್ಟ್ರಿಕ್‌ ವಾಹನ ಕ್ಷೇತ್ರದಲ್ಲಿ ಟಾಟಾ ಅಬ್ಬರ- ಒಂದೇ ಏಟಿಗೆ 10 ಸಾವಿರ ವಾಹನಕ್ಕೆ ಆರ್ಡರ್‌

ಭಾರತದ ಎಲೆಕ್ಟ್ರಿಕ್ ಕಾರು ಮಾರಾಟದ ಶೇ. 90ನ್ನು ಟಾಟಾ ಮೋಟಾರ್ಸ್ ಈಗಾಗಲೇ ತನ್ನದಾಗಿಸಿಕೊಂಡಿದೆ. ನೆಕ್ಸಾನ್ ಇವಿ ಹಾಗೂ ಟಿಗೋರ್ ಇವಿಗಳ ಮೂಲಕವೇ ಇದನ್ನು ಸಾಧಿಸಿರುವ ಕಂಪನಿ ಇದೀಗ ಎಕ್ಸ್‌ಪ್ರೆಸ್‌ -ಟಿ ಎಂಬ ಸೆಡಾನ್ ಮಾದರಿಯ ಕಾರಿಗೆ ದೊಡ್ಡ ಸಂಖ್ಯೆಯ ಆರ್ಡರ್‌ ಪಡೆದುಕೊಂಡಿದೆ.

ಕಂಪನಿ 10,000 ಎಕ್ಸ್‌ಪ್ರೆಸ್‌-ಟಿ ಸೆಡಾನ್ ಎಲೆಕ್ಟ್ರಿಕ್ ವಾಹನಗಳ ವಿತರಣೆಗೆ ಬ್ಲ್ಯೂಸ್ಮಾರ್ಟ್ ಎಲೆಕ್ಟ್ರಿಕ್ ಮೊಬಿಲಿಟಿಯೊಂದಿಗೆ ಒಪ್ಪಂದ ಮಾಡಿಕೊಂಡಿದೆ. ದೇಶದಲ್ಲಿ ಎಲೆಕ್ಟ್ರಿಕ್ ಕಾರುಗಳಿಗೆ ಈ ಪ್ರಮಾಣದ ದೊಡ್ಡ ಆರ್ಡರ್‌ ಬಂದಿರುವುದು ಇದೇ ಮೊದಲು. ಇಷ್ಟೊಂದು ಬೃಹತ್‌ ಸಂಖ್ಯೆಯ ಆರ್ಡರ್‌ನ್ನು ಜೇಬಿಗಿಳಿಸಿಕೊಂಡಿರುವ ಟಾಟಾ ಮೋಟಾರ್ಸ್, ಇವಿ ಕ್ಷೇತ್ರದಲ್ಲಿ ನಾನೇ ಅನಭಿಷಿಕ್ತ ದೊರೆ ಎನ್ನುವ ಸಂದೇಶ ರವಾನಿಸಿದೆ.

Edited By : Vijay Kumar
PublicNext

PublicNext

07/06/2022 01:39 pm

Cinque Terre

35.84 K

Cinque Terre

0

ಸಂಬಂಧಿತ ಸುದ್ದಿ