ನವದೆಹಲಿ: ಕೊರೊನಾ ಕಾಟದಿಂದ ರೋಸಿ ಹೋಗಿ ಕೊನೆಗೂ ಎಲ್ಲಾ ಮುಗೀತು ಅಂತ ಸ್ಟಾರ್ಟ್ ಅಪ್ ಬ್ಯುಸೆನೆಸ್ ಶುರುಮಾಡಿದ್ದವರಿಗೆ ಯಾಕೋ ಟೈಮ್ ಸರಿ ಇಲ್ಲ ಅನ್ಸುತ್ತೆ. ಸ್ಟಾರ್ಟ್ ಅಪ್ ಕಂಪನಯಾದ ಉದಯ್ ಬಾಗಿಲು ಮುಚ್ಚಿಕೊಂಡು ಮನೆಗೆ ಹೋಗಿದೆ. ಪರಿಣಾಮ ಸಂಪೂರ್ಣ ಸಿಬ್ಬಂದಿಯನ್ನು ವಜಾಗೊಳಿಸಿದೆ. ಸಾಕಷ್ಟು ಕನಸುಗಳನ್ನು ಹೊತ್ತಿದ್ದ ಈ ಸ್ಟಾರ್ಟ್ ಅಪ್ ಕಂಪನಿಯ ಕಥೆ ಕೊನೆಯಾಗಿದೆ. ತನ್ನ 100-120 ಉದ್ಯೋಗಿಗಳನ್ನು ಕೂಡ ಮನೆಗೆ ಕಳುಹಿಸಿದೆ.
ಎರಡು ವರ್ಷಗಳ ವಿರಾಮದ ನಂತರ ಶಾಲೆಗಳು ಪುನರಾರಂಭಗೊಂಡಾಗ ಎಡ್-ಟೆಕ್ ಕಂಪನಿಯು ಭಾರಿ ನಷ್ಟವನ್ನು ಅನುಭವಿಸಿತ್ತು. ಕಂಪನಿಯ ಸಹ-ಸಂಸ್ಥಾಪಕಿ ಸೌಮ್ಯ ಯಾದವ್, ಶಾಲೆಗಳು ಪುನರಾರಂಭಗೊಂಡಾಗ ಆನ್‌ಲೈನ್ ಶಾಲೆಯ ಮಾದರಿಯನ್ನು ಬೆಳೆಸುವಲ್ಲಿ ಉದಯ್ ಬಿಡ್ಜ್ ಮಾದರಿ ಕೆಲಸ ಮಾಡಿತ್ತು ಎಂದಿದ್ದಾರೆ.
“ಬಹಳಷ್ಟು ಚರ್ಚೆಯ ನಂತರ, ಹೆಚ್ಚಿನ ಸಮಯ ಮತ್ತು ಬಂಡವಾಳವನ್ನು ವ್ಯಯಿಸುವುದಕ್ಕಿಂತ ವ್ಯಾಪಾರವನ್ನು ಮುಚ್ಚುವುದು ಉತ್ತಮ ಎಂದು ನಾವು ನಿರ್ಧರಿಸಿದ್ದೇವೆ. ನಮ್ಮ ಹೂಡಿಕೆದಾರರು, ತಂಡದ ಸದಸ್ಯರು ಮತ್ತು ಗ್ರಾಹಕರು ತುಂಬಾ ಬೆಂಬಲ ನೀಡಿದ್ದಾರೆ. ಸ್ಟಾರ್ಟ್‌ಅಪ್‌ನ ಭಾಗವಾಗಿದ್ದ 100 ಕ್ಕೂ ಹೆಚ್ಚು ಉದ್ಯೋಗಿಗಳನ್ನು ಕೆಲಸದಿಂದ ವಜಾ ಮಾಡಲಾಗಿದೆ. ಹೀಗೆ ಕೆಲಸ ಬಿಟ್ಟ ಉದ್ಯೋಗಿಗಳಿಗೂ ಕೆಲ ಪ್ಯಾಕೇಜ್ಗಳನ್ನು ನೀಡಿದ್ದೇವೆ. ಉದ್ಯೋಗಿಗಳಿಗೆ ಹೊಸ ಉದ್ಯೋಗಗಳನ್ನು ಹುಡುಕಲು ಕಂಪನಿಯು ಸಹಾಯ ಮಾಡುತ್ತದೆ"ಎಂದು ಸೌಮ್ಯ ಯಾದವ್ ತಿಳಿಸಿದ್ದಾರೆ.
PublicNext
03/06/2022 11:09 pm