ಟೋಕಿಯೊ: ಜಪಾನ್‌ನ ಟೋಕಿಯೊದಲ್ಲಿ ಕಳೆದ ವಾರ ನಡೆದ 2022ರ ಅಂತರರಾಷ್ಟ್ರೀಯ ರೋಬೋಟ್ ಪ್ರದರ್ಶನದಲ್ಲಿ (iREX) ಕವಾಸಕಿ ಕಂಪನಿಯು ನಾಲ್ಕು ಕಾಲಿನ, ಸವಾರಿ ಮಾಡಬಹುದಾದ ಎಲೆಕ್ಟ್ರಿಕ್ ರೋಬೋಟಿಕ್ ಮೇಕೆಯನ್ನು ಅನಾವರಣಗೊಳಿಸಿದೆ.
ನಯವಾದ ಹಾಗೂ ಒರಟಾದ ಭೂಪ್ರದೇಶದಲ್ಲಿ ಚಲಿಸಬಲ್ಲ ನಾಲ್ಕು ಕಾಲಿನ ವಾಕಿಂಗ್ ರೋಬೋಟ್ 'ಬೆಕ್ಸ್' 100 ಕೆ.ಜಿ.ಯಷ್ಟು ಸರಕುಗಳನ್ನು ಸಾಗಿಸಬಲ್ಲದು. ನಿರ್ಮಾಣ ಸಾಮಗ್ರಿಗಳನ್ನು ಸಾಗಿಸಲು ಮತ್ತು ರಿಮೋಟ್ ಕೈಗಾರಿಕಾ ಸೈಟ್ ಪರಿಶೀಲನೆಗಳನ್ನು ಕೈಗೊಳ್ಳಲು ಇದನ್ನು ಬಳಸಬಹುದು ಎಂದು ಕಂಪನಿಯು ಹೇಳಿದೆ.
PublicNext
15/03/2022 07:42 pm