ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರೋಬೋ ಸುಂದರಿ ಈಕೆ ಬ್ಯಾಟರಿ ಚಾಲಿತ ಬೆಡಗಿ !

ಮೈಸೂರು: ಅಲ್ಲಿ ಆಕೆ ಬಂದಾಗ ಅಲ್ಲಿದ್ದವರಿಗೆ ಏನೋ ಆಶ್ಚರ್ಯ. ಆಕೆಯ ರೂಪ ಆಕೆಯ ನಡಿಗೆ. ಎಲ್ಲವನ್ನೂ ಕಂಡು ಅಲ್ಲಿದ್ದ ಗ್ರಾಹಕರಿಗೆ ರೋಮಾಂಚನವಾಗುತ್ತಿದೆ. ಅಂದ್ಹಾಗೆ ಆಕೆ ಯಾರೂ ಗೊತ್ತಿದೆ ?

ಮೈಸೂರಿನ ಹೋಟೆಲ್‌ವೊಂದರಲ್ಲಿ ರೋಬೋ ಲೇಡಿ ಬಂದಾಗಿದೆ. ಹೌದು ! ಈಕೆಯ ಮೂಲ ಕೆಲಸ ಸರ್ವ್ ಮಾಡೋದು. ಗ್ರಾಹಕರಿಗೆ ಊಟ-ತಿಂಡಿ-ಚಹಾರ-ನೀರು ಹೀಗೆ ಎಲ್ಲವನ್ನೂ ಈ ರೋಬೋ ಸುಂದರಿನೇ ಕೊಡೊದು.

ರೋಬೋ ಸುಂದರಿ ಬ್ಯಾಟರಿ ಚಾಲಿತಳೇ ಆಗಿದ್ದಾಳೆ.2 ಗಂಟೆ ಚಾರ್ಜ್ ಮಾಡಿದ್ರೆ ಸಾಕು. 8 ಗಂಟೆ ಕೆಲಸ ಮಾಡುತ್ತಾಳೆ ಈ ರೋಬೋ ಸುಂದರಿ.ದೆಹಲಿಯಿಂದ ಇಲ್ಲಿಗೆ ತರಿಸಲಾಗಿರೋ ಈ ರೋಬೋ ಬೆಲೆ 2.5. ಲಕ್ಷ ರೂಪಾಯಿ ಆಗಿದೆ.

ಹೋಟೆಲ್ ಮಾಲೀಕರು ಸದ್ಯ ಈ ರೋಬೋ ಮೂಲಕ ಹೊಸ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಇದು ಸಕ್ಸಸ್ ಆದ್ರೆ ಇನ್ನೂ 6 ರೋಬೋಗಳನ್ನ ತರೋ ಪ್ಲಾನ್ ನಲ್ಲಿಯೇ ಇದ್ದಾರೆ.

Edited By : Shivu K
PublicNext

PublicNext

17/02/2022 03:55 pm

Cinque Terre

48.19 K

Cinque Terre

0

ಸಂಬಂಧಿತ ಸುದ್ದಿ