ಬೆಂಗಳೂರು: ಸೋಷಿಯಲ್ ಮೀಡಿಯಾ ಬಳಕೆದಾರರಿಗೆ ನಿನ್ನೆ (ಸೋಮವಾರ) ರಾತ್ರಿ ಬಿಗ್ ಶಾಕ್ ಎದುರಾಗಿತ್ತು. ಇದ್ದಕ್ಕಿದ್ದ ಹಾಗೆ ಜನಪ್ರಿಯ ಸಾಮಾಜಿಕ ಜಾಲತಾಣಗಳಾದ ಫೇಸ್ಬುಕ್, ವಾಟ್ಸಪ್, ಇನ್‌ಸ್ಟಾಗ್ರಾಂ ಸಂಪೂರ್ಣ ಸ್ಥಗಿತವಾಗಿತ್ತು. ಸಂದೇಶ ಕಳಿಸಲು, ಅಪ್ಲೋಡ್, ಡೌನ್ಲೋಡ್ ಆಗದೆ ಕೋಟಿ-ಕೋಟಿ ಗ್ರಾಹಕರು ಪರದಾಡಿದ್ದರು. ಇದೀಗ ಈ ಬಗ್ಗೆ ಫೇಸ್ಬುಕ್ ಒಡೆಯ ಜುಕರ್ಬರ್ಗ್ ಟ್ವೀಟ್ ಮಾಡಿ ಗ್ರಾಹಕರ ಬಳಿ ಕ್ಷಮೆ ಕೇಳಿದ್ದಾರೆ.
ಜಗತ್ತಿನಾದ್ಯಂತ ರಾತ್ರಿ 9 ಗಂಟೆಗೆ ಸ್ಥಗಿತಗೊಂಡಿದ್ದ ವಾಟ್ಸಪ್, ಫೇಸ್‍ಬುಕ್, ಇನ್‍ಸ್ಟಾಗ್ರಾಂ ಮಧ್ಯರಾತ್ರಿ 3.30ರ ವೇಳೆಗೆ ಮತ್ತೆ ಸಹಜ ಸ್ಥಿತಿಗೆ ಮರಳಿದವು. ಫೇಸ್‌ಬುಕ್ ಸೇವೆ ಸ್ಥಗಿತಗೊಂಡಿದ್ದರಿಂದ ಫೇಸ್‌ಬುಕ್‌ನ ಷೇರು ಮೌಲ್ಯ ಕೆಲವೇ ಗಂಟೆಗಳಲ್ಲಿ ಶೇಕಡಾ 4.9ರಷ್ಟು ಕುಸಿದಿದೆ. ಪರಿಣಾಮ ಮಾಲೀಕ ಮಾರ್ಕ್ ಝುಕರ್‍ಬರ್ಗ್‍ಗೆ ಕೆಲವೇ ಗಂಟೆಗಳಲ್ಲಿ 44,743 ಕೋಟಿ ರೂ. ನಷ್ಟವಾಗಿದೆ.
2014ರಲ್ಲಿ ವಾಟ್ಸಪ್ ಅನ್ನು ಫೇಸ್‍ಬುಕ್ ಖರೀದಿಸಿತ್ತು. ಜಗತ್ತಿನಲ್ಲಿ 200 ಕೋಟಿ ಫೇಸ್‌ಬುಕ್ ಬಳಕೆದಾರರಿದ್ದಾರೆ. ಭಾರತದಲ್ಲಿ 53 ಕೋಟಿ ವಾಟ್ಸಪ್ ಬಳಕೆದಾರರು, 41 ಕೋಟಿ ಫೇಸ್‍ಬುಕ್ ಬಳಕೆದಾರರು ಮತ್ತು 21 ಕೋಟಿ ಇನ್‍ಸ್ಟಾಗ್ರಾಂ ಬಳಕೆದಾರರು ಇದ್ದಾರೆ.
PublicNext
05/10/2021 09:23 am